ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದೇಶ ಸೇವೆ ಗೈದು ಚಕ್ಕಡಿ ಮೆರವಣಿಗೆಯಲ್ಲಿ ಬಂದ ಯೋಧ

ಕುಂದಗೋಳ : ಎಲ್ಲೇಡೆ ಜೈ ಜವಾನ್ ಜೈ ಕಿಷಾನ್ ಎಂಬ ಘೋಷವಾಕ್ಯ, ಗ್ರಾಮದಲ್ಲಿ ಜನರಲ್ಲಿ ಎಲ್ಲೇ ಮೀರಿದ ಉತ್ಸಾಹ ಸಂಭ್ರಮ ತಾಯ್ನಾಡಿಗೆ 31 ವರ್ಷ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಮರಳಿದ ಯೋಧನಿಗೆ ಡೊಳ್ಳಿನ ಮೇಳಗಳಿಂದ ಸ್ವಾಗತ.

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಸಿ.ಆರ್.ಫಿ.ಎಫ್ ಯೋಧ ಹಣುಮಂಚಪ್ಪ ಭದ್ರಾಪೂರ ಕಳೆದ 31 ವರ್ಷಗಳಿಂದ ಸಿ.ಆರ್.ಫಿ.ಎಫ್ ಯೋಧನಾಗಿ ಭಾರತ ದೇಶದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಂತಹದ್ದೊಂದು ಅಭೂತಪೂರ್ವ ಕಾರ್ಯಕ್ರಮ ಏರ್ಪಡಿಸಿ ಜೈ ಜವಾನ್ ಜೈ ಕಿಸಾನ್ ಎಂಬ ಮಾತಿನಂತೆ ಯೋಧನನ್ನು ಚಕ್ಕಡಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಅಲ್ಲಾಪೂರ ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಯೋಧನಿಗೆ ಸನ್ಮಾನ ಮಾಡಿ ದೇಶ ಸೇವೆ ಮಹತ್ವವನ್ನು ಸಾರಿ ಹೇಳಿದರು.

Edited By : Shivu K
Kshetra Samachara

Kshetra Samachara

06/02/2022 02:03 pm

Cinque Terre

34.12 K

Cinque Terre

2

ಸಂಬಂಧಿತ ಸುದ್ದಿ