ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಅಬ್ಬಾ ! ಇಂದಿನ ಮಕ್ಕಳು ಆ ಮಕ್ಕಳ ಜ್ಞಾನ, ಅವರ ಲವಲವಿಕೆ, ಆಟ ಪಾಠ ಕೇಳಬೇಕೇ, ತಂದೆ ತಾಯಿಗಳಿಗಿಂತ ಒಂದು ಹೆಜ್ಜೆ ಮುಂದೆ ಇರ್ತಾರೆ ಅಲ್ವಾ ?
ಅದರಂತೆ, ಇಲ್ಲೋಂದು ಪುಟಾಣಿ ಮರಿ, ಕೇವಲ ತನ್ನ ಎರಡನೇ ವಯಸ್ಸಿನಲ್ಲಿ ಚಿತ್ರ ನೋಡಿ ಹೂ, ಹಣ್ಣು, ತರಕಾರಿ, ಗಣಿತದ ಚಿಹ್ನೆ, ಪ್ರಾಣಿ, ಕೀಟ, ದೇಶದ ಪ್ರಸಿದ್ಧ ಸ್ಥಳ, ವಾಹನಗಳನ್ನು ಗುರುತಿಸಿ ಹೆಸರು ಸಹ ಹೇಳುತ್ತಾಳೆ. ಅದು ಕೇವಲ 6 ನಿಮಿಷದಲ್ಲಿ ಈ ದಾಖಲೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯಿಂದ ಪದಕ ಪ್ರಮಾಣ ಪತ್ರವನ್ನ ಈ ಮಗು ಪಡೆದಿದ್ದಾಳೆ.
ಅರೆ ! ಯಾರಿ ಚೂಟಿ ಪಾಪು ಅಂದ್ರಾ ? ಕುಂದಗೋಳ ಪಟ್ಟಣದ ಸೋನಾರ್ ಪ್ಲಾಟ್ ನಿವಾಸಿ ಅರುಣಕುಮಾರ್ ಹೊಳ್ಳಣ್ಣನವರ ಪುತ್ರಿ ಲಾಷಾ ಹೊಳ್ಳಣ್ಣನವರ ಈ ಸಾಧನೆ ಮಾಡಿದ ಮಗು. ತಾಯಿ ತಂದೆ ಮಮತೆಯ ಮಾತಲ್ಲೇ ಇಷ್ಟೋಂದು ಜ್ಞಾನ ಕೇವಲ ಎರಡೇ ವಯಸ್ಸಿಗೆ ಈ ಮಗುವಿಗೆ ಓಲಿದಿದೆ.
ಅಂದಹಾಗೇ ಎರಡನೇ ವಯಸ್ಸಿಗೆ ಲಾಷಾ 4 ಹಾಡುಗಳು, 10 ತರಹದ ಹೂ, 14 ದೇಶದ ಪ್ರಸಿದ್ಧ ಸ್ಥಳಗಳು, 25 ತರಹದ ತರಕಾರಿ 25 ತರಹದ ಹಣ್ಣುಗಳು, 9 ಗಣಿತದ ಚಿಹ್ನೆ, 5 ಜಲಚರ ಪ್ರಾಣಿ, 16 ವಾಹನಗಳು, 20 ಸಾಕು ಪ್ರಾಣಿ, 21 ಪಕ್ಷಿ, 24 ಕಾಡು ಪ್ರಾಣಿ, 4 ಉಭಯವಾಸಿ ಪ್ರಾಣಿ, ಕೀಟಗಳು ಸೇರಿದಂತೆ ಮನುಷ್ಯನ ದೇಹದ 23 ಭಾಗಗಳನ್ನು ಕೇವಲ 6 ನಿಮಿಷದಲ್ಲಿ ಹೇಳಿ ತೋರಿಸುತ್ತಾಳೆ.
ಕಳೆದ ಡಿಸೆಂಬರ್ 2021 ರಲ್ಲಿ ನಡೆದ ಆನ್ಲೈನ್ ಸ್ಪರ್ಧೆಯಲ್ಲಿ ಮಗುವಿನ ಜ್ಞಾನಕ್ಕೆ ಇಂಡಿಯನ್ ಬುಕ್ ಆಫ್ ರಿಕಾರ್ಡ್ ಸಂಸ್ಥೆ ಗೌರವಿಸಿ ಪ್ರಶಂಸೆ ನೀಡಿರುವುದು ಅದೆಷ್ಟೋ ಮಕ್ಕಳಿಗೆ ಪ್ರೇರಣೆಯಾಗಿದೆ.
Kshetra Samachara
05/02/2022 03:49 pm