ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶೇಷ ಲೋಕದಲ್ಲಿ ನಿಮ್ಮ PublicNext-ಇದು ಸರಳ ವಿಶೇಷ ವರ್ಷಾಚರಣೆ

ಹುಬ್ಬಳ್ಳಿ: ನಮ್ಮ ನಡುವೆ ಇರೋ ವಿಶೇಷ ಚೇತನಗಳು. ಮನಸ್ಸು ನಿರ್ಮಲ. ಕನಸುಗಳು ಕಪ್ಪು-ಬಿಳುಪು. ಈ ವಿಶಿಷ್ಠ ಲೋಕದಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಶೇಷ ಸರಳ ಹೊಸ ವರ್ಷವನ್ನ ಆಚರಿಸಿದೆ. ಬನ್ನಿ ನೋಡೋಣ.

ಚೆಂದದ ಅಂದದ ಪರಿಸರ. ಸಿದ್ಧಾರೂಢ ಮಠದ ಹಿಂಭಾಗದಲ್ಲಿ ಇರೋ ವಿಶೇಷ ಶಾಲೆ. ಅದುವೇ ಸರ್ಕಾರಿ ಅಂಧ ಮಕ್ಕಳ ಶಾಲೆ. ಮಠದ ಜಾಗದಲ್ಲಿ ಭವ್ಯವಾಗಿಯೇ ನಿರ್ಮಾಣಗೊಂಡಿದೆ. ಇದೇ ಶಾಲೆಯಲ್ಲಿಯೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸರಳವಾಗಿಯೇ ಹೊಸ ವರ್ಷವನ್ನ ಆಚರಿಸಿದೆ.

ವರ್ಷಾಚರಣೆಯಲ್ಲಿ ಪಟಾಕಿಗಳ ಸದ್ದಿಲ್ಲ. ಕೇಕ್ ಕಟ್ ಮಾಡುವ ಗೋಜಿಗೂ ಹೋಗಲಿಲ್ಲ. ಇಲ್ಲಿ ಇದದ್ದು ಕೇವಲ ಮಕ್ಕಳ ಖುಷಿ. ಅವರ ಹಾಡುಗಾರಿಕೆ. ಅವರಲ್ಲಿ ಅಡಗಿದ ಪ್ರತಿಭೆ ಅನಾವರಣ. ಹಾಡು-ಆಟ ಮತ್ತು ಸಿಹಿ ಹಂಚಿ ಸಿಹಿ ತಿಂದ ಖುಷಿ.

ಈ ಮಕ್ಕಳಲ್ಲಿ ಸ್ಮರಣ ಶಕ್ತಿ ಅತಿ ಹೆಚ್ಚು. ಅದನ್ನ ಅವರು ಅಷ್ಟೇ ಅದ್ಬುತವಾಗಿಯೇ ಬಳಸುತ್ತಾರೆ. ಕಣ್ಣು ಕಾಣದೇ ಇದ್ದರೂ ಈ ಸ್ಮರಣ ಶಕ್ತಿಯಿಂದಲೇ ಎಲ್ಲವನ್ನೂ ನಿಭಾಸುತ್ತಾರೆ. ಇಷ್ಟು ವಿಶೇಷ ಮಕ್ಕಳ ಶಾಲೆಯಲ್ಲಿ 40 ಅಂಧ ಮಕ್ಕಳು ಓದುತ್ತಾರೆ. ಸದ್ಯ ಕೋವಿಡ್ ಆತಂಕ ಇದೆ. ಒಮಿಕ್ರಾನ್ ಭಯವೂ ಇದೆ. ಈ ಕಾರಣಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೂ ಈ ವಿಶೇಷ ಚೇತನಗಳ ಲೋಕದಲ್ಲಿ ನಗುವಿಗೆ ಬರ ಇಲ್ಲ. ಮುಗ್ಧ ಖುಷಿಗೆ ಯಾರೂ ಸಾಟಿ ಅಲ್ಲ. ಅಂತಹ ಚಂದದ, ಅಂದದ ಲೋಕದಲ್ಲಿ ವಿಶೇಷವಾಗಿಯೇ PublicNext ಹೊಸ ವರ್ಷ ಆಚರಿಸಿದೆ.ನಿಮಗೂ ಆ ಖುಷಿಯನ್ನ ವಿಷ್ಯೂವಲ್ ರೂಪದಲ್ಲಿ ಕಟ್ಟಿಕೊಟ್ಟು ಹೆಮ್ಮೆ ಪಡುತ್ತಿದೆ.

ಕ್ಯಾಮರಾಪರ್ಸನ್ ಇಷ್ಟಾ ಜೊತೆ ರೇವನ್ ಪಿ.ಜೇವೂರ್

ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/01/2022 07:07 pm

Cinque Terre

75.49 K

Cinque Terre

1

ಸಂಬಂಧಿತ ಸುದ್ದಿ