ಕುಂದಗೋಳ : ಈ ರೈತಾಪಿ ಜನರಿಗೆ ಜಾನುವಾರುಗಳ ಮೇಲಿನ ಪ್ರೀತಿ ಬಾಂಧವ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ. ಅವರು ತಮ್ಮ ಮನೆಯ ಜಾನುವಾರುಗಳನ್ನು ಮನೆಯ ಮಕ್ಕಳಂತೆ ಪ್ರೀತಿಸುತ್ತಾರೆ. ಅವುಗಳ ಜನ್ಮದಿನವನ್ನು ಸಹ ಆಚರಿಸುತ್ತಾರೆ.
ಸದ್ಯ ಕುಂದಗೋಳ ಪಟ್ಟಣದ ವಸಂತ ಸಿಂದೆ ಸಹೋದರರ ಕುಟುಂಬ ತಮ್ಮ ಮನೆಗೆ ತಂದ ಜಾನುವಾರುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವದಷ್ಟೇ ಅಲ್ಲದೆ ಕಳೆದ ಐದು ವರ್ಷಗಳ ಕಾಲ ತಮ್ಮೊಂದಿಗಿದ್ದ ಜಾನುವಾರುಗಳ ಪೋಟೋ ಸಮೇತ ಕೇಕ್ ಸಿದ್ಧಪಡಿಸಿ ಬರ್ತಡೇ ಆಚರಿಸಿದ್ದಾರೆ.
ಜಾನುವಾರುಗಳನ್ನು ಶುಭ್ರವಾಗಿ ತೊಳೆದು, ಶೃಂಗಾರ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮಾರುತಿ ದರ್ಶನ ಪಡೆದುಕೊಂಡು ಬಂದು, ಆರತಿ ಬೆಳಗಿ ಪೂಜೆ ಮಾಡಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿ ತಮ್ಮ ಜಾನುವಾರುಗಳ ಪ್ರೇಮ ಮೆರೆದಿದ್ದಾರೆ.
ಸದ್ಯ ಇವರ ಪ್ರಾಣಿ ಪ್ರೀತಿ ಎಲ್ಲರ ಗಮನಸೆಳೆದಿದೆ.
Kshetra Samachara
22/12/2021 06:01 pm