ಕುಂದಗೋಳ : ನಮ್ಮೂರು ಬದಲಾಗಲಿ, ನಮ್ಮ ಸುತ್ತ ಮುತ್ತಲಿನ ಹಳ್ಳಿಗಳು ಅಭಿವೃದ್ಧಿಯಾಗಲೇಂದು ಇಲ್ಲೋಂದು ಯುವಕರ ತಂಡ ಅಂದ್ರೇ ಒಂದೇ ವಿಚಾರ ಹೊಂದಿದ ಸಮಾನ ಮನಸ್ಕರರ ತಂಡ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹಾಳಾಗಿ ಹೋಗಿದ್ದ ಬಸ್ ನಿಲ್ದಾಣಕ್ಕೆ ಹೊಸ ರೂಪ ಕೊಟ್ಟಿದೆ.
ನಿತ್ಯ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಯಾಣಿಕರಿಗೆ ಆಸರೆಯಾಗಬೇಕಿದ್ದ ಬಸ್ ನಿಲ್ದಾಣ ಕುಡುಕರ ಅಡ್ಡೆಯಾಗಿ ಕಸ ಬೆಳೆದು ನಿರ್ವಹಣೆ ಇಲ್ಲದೆ ಹಾಳಾಗಿತ್ತು, ಈದೀಗ ಆ ಬಸ್ ನಿಲ್ದಾಣ ಸ್ವಚ್ಚಂದವಾಗಿ ಕಂಗೋಳಿಸುತ್ತಿದೆ.
ಕಾರಣ, ಈ ಸಮಾನ ಮನಸ್ಕರ ಯುವಕರು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಪಡೆದು ತಮ್ಮದ ಕೈಲಾದ ಸೇವೆ ಎಂಬಂತೆ ಬಸ್ ನಿಲ್ದಾಣ ಸ್ವಚ್ಚ ಮಾಡಿ ಬಣ್ಣ ಬಳಿದು ಬಿದ್ದಿರುವ ಕಟ್ಟೆ ಕಟ್ಟಿ ಜನರ ಉಪಯೋಗಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ.
ಸಮಾನ ಮನಸ್ಕರ ಯುವಕರ ಕಾರ್ಯಕ್ಕೆ ಜನ ಸಹ ಬೆಂಬಲ ಸೂಚಿಸಿ ಅವರ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.
ಒಟ್ಟಾರೆ ಹಾಳಾದ ಬಸ್ ನಿಲ್ದಾಣವೊಂದು ಅಭಿವೃದ್ಧಿ ಮಾರ್ಗ ಕಂಡು ಸಮಾನ ಮನಸ್ಕರರ ಕಾರ್ಯದಿಂದ ಅದೆಷ್ಟೋ ಜನರಿಗೆ ಈಗ ಆಶ್ರಯ ತಾಣವಾಗಿದೆ.
Kshetra Samachara
12/12/2021 01:01 pm