ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಕಲವ್ಯನಾಗಿ ರಾಷ್ಟ್ರ ಮಟ್ಟಲ್ಲಿ ಮಿಂಚಿದ ಹುಬ್ಬಳ್ಳಿ ಪ್ರತಿಭೆ! ಈಗ ನೆರವುಗಾಗಿ ಪರದಾಟ

ಹುಬ್ಬಳ್ಳಿ: ಒಂದು ಕೈಯಿಲ್ಲ, ಮುಂದಿನ ಜೀವನ ಹೇಗೆ ಎನ್ನುವ ಚುಚ್ಚು ಮಾತುಗಳನ್ನು ಮೆಟ್ಟಿ, ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಛಲಗಾತಿ ಈಕೆ. ಚಿನ್ನದ ಹುಡುಗ ನೀರಿಜ್ ಛೊಪ್ರಾ ಸಾಧನೆಯ ಪ್ರೇರಣೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ತುಡಿತ ಇವಳದು. ಅಷ್ಟಕ್ಕೂ ಇವರು ಯಾರು, ಇವರ ಸಾಧನೆ ಏನು ಎಂಬುದನ್ನು ತೋರಿಸುತ್ತೆವೆ ನೋಡಿ...

13 ವರ್ಷಗಳ ಹಿಂದೆ ವಿದ್ಯುತ್ ತಂತಿ ತಗುಲಿ ಎಡಗೈ ಕಳೆದುಕೊಂಡು, ನಿಂದಕರ ಮುಂದೆ ಸಾಧಿಸಿ ತೋರಿಸಬೇಕು ಎನ್ನುವ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ ಸಾಧಕಿ, ನಿಲೋಫರ್ ಧಾರವಾಡ. ಇವರು ಹುಬ್ಬಳ್ಳಿಯ ಕಲ್ಮೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಡು ಬತಡನದಲ್ಲೂ ತಂದೆ ಶಂಶುದ್ಧಿನ ಧಾರವಾಡ, ಹಮಾಲಿ ಕೆಲಸ ಮಾಡಿ ಮಗಳ ಸಾಧನೆಗೆ ಬೆನ್ನೆಲುಬಾಗಿದ್ದರು. 10 ನೇ ವಯಸ್ಸಿನಲ್ಲಿದ್ದಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಾಗಿ, ಎಡಗೈಯನ್ನು ಸಂಪೂರ್ಣ ಕಳೆದುಕೊಂಡು. ಈ ಅಂಗ ವೈಖಲ್ಯ ತನ್ನ ಅಸಹಾಯಕತೆಯಿಂದ ಇನ್ನೊಬ್ಬರ ನೆರವು ಬಯಸದೆ, ದಿಟ್ಟತನ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಹಂಬಲದಲ್ಲಿದ್ದಾರೆ. ಅಷ್ಟಕ್ಕೂ ಅವರ ಸಾಧನೆ ಏನು ಮಾಡಿದ್ದಾರೆ ಎಂಬುದನ್ನು ಅವರಿಂದಲೇ ಕೇಳಿ.

ತನ್ನ ಸಾಧನೆಗೆ ಬೆನ್ನಲುಬಾಗಿದ್ದ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಸಂಕಷ್ಟದ ಸಂದರ್ಭದಲ್ಲೂ, ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಾವಲಿನ್ ಎಸೆತದಲ್ಲಿ ಕಂಚಿನ ಪದಕ, ಗುಂಡು ಎಸೆತದಲ್ಲಿ ನಾಲ್ಕನೇ ಸ್ಥಾನಕ್ಕೆ ಪಡೆದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಏಕಲವ್ಯನಾಗಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಬಡತನದ ಬೇಗೆಗೆ ಸಿಲುಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಈ ಪ್ರತಿಭೆಗೆ ಸೂಕ್ತ ನೆರವಿನೊಂದಿಗೆ ಪ್ರೋತ್ಸಾಹದ ಅಗತ್ಯವಿದೆ. ಸಹಾಯ ಮಾಡಬೇಕೆನ್ನುವವರು 8861737430 ಸಂಪರ್ಕಿಸಬಹುದು.

-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

08/12/2021 02:00 pm

Cinque Terre

15.8 K

Cinque Terre

1

ಸಂಬಂಧಿತ ಸುದ್ದಿ