ಹುಬ್ಬಳ್ಳಿ: ಆಕೆ ಮೂವರು ಮಕ್ಕಳ ತಾಯಿ. ಕುಟುಂಬದ ಹೊಣೆ ಹೊತ್ತ ಆ ಮಹಿಳೆ ಈಗ ಪುನೀತ್ ರಾಜ್‍ಕುಮಾರ್ ಅವರ ಮೇಲಿನ ಅಭಿಮಾನಕ್ಕೆ ವಿನೂತನ ನಿರ್ಧಾರವೊಂದನ್ನು ಕೈಗೆತ್ತಿಕೊಂಡಿದ್ದಾಳೆ. ಪುನೀತ್ ಅಗಲಿ ಒಂದು ತಿಂಗಳಾಗಿದ್ದು, ಪುನೀತ್ ಸಮಾಧಿಯ ದರ್ಶನಕ್ಕೆ ಮ್ಯಾರಥಾನ್ ಓಟದ ಮೂಲಕ ಹೊರಟಿದ್ದಾಳೆ.
ಧಾರವಾಡ ಜಿಲ್ಲೆಯ ಮನಗುಂಡಿಯ ದಾಕ್ಷಾಯಿಣಿ ಪಾಟೀಲ ಎಂಬುವಂತ ಮಹಿಳೆಯೇ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ದರ್ಶನಕ್ಕೆ ಹೊರಟಿದ್ದಾರೆ. 30 ವರ್ಷದ ದ್ರಾಕ್ಷಾಯಿಣಿಯವರು ಬಾಲ್ಯದಿಂದಲೇ ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ. ಪುನೀತ್ ರಾಜಕುಮಾರ ಅವರ ಚಿತ್ರ ಅಂದರೇ ಅಚ್ಚುಮೆಚ್ಚು. ಈಗ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದ ಸಾಕಷ್ಟು ನೋವನ್ನು ಅನುಭವಿಸಿದ ಅಭಿಮಾನಿ ಈಗ ಮ್ಯಾರಥಾನ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಸಮಾಧಿ ದರ್ಶನ ಮಾಡಲು ಕುಟುಂಬ ಸಮೇತವಾಗಿ ಹೊರಟಿದ್ದಾರೆ.
ಶಾಲಾ ಕಾಲೇಜಿನಲ್ಲಿಯೇ ಆಟಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ದ್ರಾಕ್ಷಾಯಿಣಿ ಅವರು ಸಂಸಾರದ ಜಂಜಾಟದಿಂದ ಸ್ಪೋರ್ಟ್ಸ್ ನಿಂದ ದೂರ ಉಳಿದಿದ್ದ ದಾಕ್ಷಾಯಿಣಿ ಅವರು ಈಗ ಪುನೀತ್ ರಾಜ್‍ಕುಮಾರ್ ಅವದ ಸಮಾಧಿ ದರ್ಶನಕ್ಕೆ ಮ್ಯಾರಥಾನ್ ಕೈಗೊಂಡಿದ್ದಾರೆ.ಅಲ್ಲದೇ ರಕ್ತದಾನ ಹಾಗೂ ನೇತ್ರದಾನದ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದಾರೆ.
ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ದಾಕ್ಷಾಯಿಣಿ ಪಾಟೀಲ ಅವರಿಗೆ ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಕನ್ನಡಪರ ಹೋರಾಟಗಾರರ ಸಂಘ ಹಾಗೂ ವಿವಿಧ ಸಾಮಾಜಿಕ ಕಾರ್ಯಕರ್ತರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
Kshetra Samachara
30/11/2021 02:03 pm