ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸೂರು ಕುಸಿದು ವೃದ್ಧೆಯ ಬದುಕು ಅತಂತ್ರ

ನವಲಗುಂದ : ಮಳೆಯ ಅವಾಂತರಕ್ಕೆ ಈಗಾಗಲೇ ನವಲಗುಂದ ಭಾಗದಲ್ಲೂ ಸಾಕಷ್ಟು ಮನೆಗಳಿಗೆ ಹಾನಿಯುಂಟಾಗಿದ್ದು, ಇದರಿಂದ ಜನ ಜೀವನ ಸಹ ಅಸ್ತವ್ಯಸ್ತವಾಗಿದೆ. ಈಗ ತಾಲೂಕಿನ ಶಿರೂರು ಗ್ರಾಮದಲ್ಲೂ ಇದೆ ಪರಿಸ್ಥಿತಿ ಬಂದೊದಗಿದ್ದು, ಜನರು ಪರದಾಟ ನಡೆಸುವಂತಾಗಿದೆ.

ನಿರಂತರ ಸುರಿಯುತ್ತಿರುವ ಮಳೆಗೆ ನವಲಗುಂದ ತಾಲೂಕಿನಾದ್ಯಂತ ಸುಮಾರು 9 ಮನೆಗಳಿಗೆ ಹಾನಿಯುಂಟಾಗಿದ್ದು, ಈಗ ಶಿರೂರು ಗ್ರಾಮದ ಅಂಬೇಡ್ಕರ್ ಕಾಲೋನಿಯ ನಿವಾಸಿಯಾದ ನೀಲವ್ವ ಬಸಪ್ಪ ಕಲ್ಲೇಕನವರ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಕುಸಿದಿದ್ದು, ಗೋಡೆ ಬಿದ್ದಿದೆ. ಇದರಿಂದ ವಾಸಸ್ಥಾನಕ್ಕೆ ಸ್ಥಳವಿಲ್ಲದೆ ನೀಲವ್ವ ಬಿದ್ದ ಮನೆಯಲ್ಲೇ ವಾಸಿಸುವ ಅನಿವಾರ್ಯತೆ ಬಂದಿದೆ.

ಇದುವರೆಗೂ ಯಾವೊಬ್ಬ ಅಧಿಕಾರಿಗಳು ಸಹ ಇತ್ತ ಮುಖ ಮಾಡಿಲ್ಲ. ಎಂದು ವೃದ್ಧೆ ತನ್ನ ಅಳಲನ್ನು ತೋಡಿಕೊಂಡಿದ್ದು, ಕೂಡಲೇ ಅಧಿಕಾರಿಗಳು ಪರಿಹಾರಕ್ಕೆ ಮುಂದಾಗಬೇಕಿದೆ.

Edited By : Nagesh Gaonkar
Kshetra Samachara

Kshetra Samachara

21/11/2021 08:59 pm

Cinque Terre

81.38 K

Cinque Terre

2

ಸಂಬಂಧಿತ ಸುದ್ದಿ