ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಚೋಟೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯ ಶೋಕಸಾಗರದಲ್ಲಿ ಭಕ್ತ ಜನತೆ

ಕುಂದಗೋಳ : ಕಳೆದೆರಡು ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಲೋಚನೇಶ್ವರ ವಿರಕ್ತಮಠದ 5ನೇ ಪೀಠಾಧಿಪತಿ ಮಹಾತಪಸ್ವಿ ರಾಚೋಟೇಶ್ವರ ಮಹಾಸ್ವಾಮಿಗಳು ತಮ್ಮ 103ನೇ ವಯಸ್ಸಿನಲ್ಲಿ ಲೋಚನೇಶ್ವರ ಮಠದಲ್ಲಿ ಇಂದು ಲಿಂಗೈಕ್ಯರಾಗಿದ್ದಾರೆ.

ಸರಿ ಸುಮಾರು 200 ವರ್ಷದ ಇತಿಹಾಸವಿರುವ ಕುಂದಗೋಳ ತಾಲೂಕಷ್ಟೇ ಅಲ್ಲದೇ ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದ ಸ್ವಾಮಿಗಳು ತಮ್ಮ ಪ್ರವಚನ ಹಾಗೂ ಮಾತಿನ ಶೈಲಿಯಿಂದಲೇ ಹೆಸರಾಗಿದ್ದರು. 2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ದೇವರನ್ನು ಸರ್ವ ಸ್ವಾಮಿಗಳ ನೇತೃತ್ವದಲ್ಲಿ ಪೀಠಾಧಿಪತಿಯಾಗಿ ಮಾಡಿ ಮಠದ ಏಳ್ಗೆಗೆ ಚಿಂತನೆ ಮಾಡಿದ್ದರು. ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದರು. ತಮ್ಮ ಅನಾರೋಗ್ಯದ ಪರಿಸ್ಥಿತಿಯಲ್ಲೂ ಮಹಾಸ್ವಾಮಿಗಳು ಲಿಂಗಪೂಜೆಯನ್ನು ನಿಲ್ಲಿಸಿರಲಿಲ್ಲಾ.

ಕಳೆದ 2 ಎರಡು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಚೋಟೇಶ್ವರ ಮಹಾಸ್ವಾಮಿಗಳಿಗೆ ಭಕ್ತರು ಮಠದ ಹಿಂದಿನ ಲಿಂಗೈಕ್ಯ ಮಠಾಧಿಪತಿಗಳಂತೆ ಅವರಿಗೂ ಸಹ ಮಠದ ಆವರಣದಲ್ಲೇ ಲಿಂಗೈಕ್ಯರಾಗುವುದಕ್ಕೂ ಮೊದಲೇ ಗದ್ದುಗೆ ನಿರ್ಮಿಸಿದ್ದರು.

ಸದ್ಯ ಲೋಚನೇಶ್ವರ ವಿರಕ್ತಮಠದ ರಾಚೋಟೇಶ್ವರ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು ಇಡೀ ಭಕ್ತ ಸಾಗರವೇ ಶೋಕದಲ್ಲಿ ಮುಳುಗಿದೆ. ಇನ್ನು ಇವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5 ಕ್ಕೆ ಕಮಡೊಳ್ಳಿ ಗ್ರಾಮದಲ್ಲಿ ನೆರವೇರಲಿದೆ.

Edited By : Nirmala Aralikatti
Kshetra Samachara

Kshetra Samachara

18/11/2021 12:53 pm

Cinque Terre

38.34 K

Cinque Terre

10

ಸಂಬಂಧಿತ ಸುದ್ದಿ