ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ತೊದಲು ನುಡಿಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳುವ ಮುದ್ದುಕಂದ ಈ ಮಧು

ಕುಂದಗೋಳ: ಇಲ್ಲೊಬ್ಬ ರೈತನ ಮಗಳು ಇನ್ನೂ ಶಾಲೆ ಮೆಟ್ಟಿಲು ಹತ್ತಿಲ್ಲಾ, ಶಿಕ್ಷಕರ ಪಾಠ ಕೇಳಿಲ್ಲಾ, ಆಗ್ಲೇ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪ್ರಶ್ನೆಗಳಿಗೆ ಚಟ ಪಟ ಅಂತಾ ತೊದಲು ನುಡಿಯಲ್ಲಿ ಉತ್ತರ ಹೇಳ್ತಾಳೆ.

ಈ ಬಾಲಕಿ ಹೆಸರು ಮಧು ರಾಮಪ್ಪ ತಳವಾರ. ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಈ ಬಾಲಕಿಗೆ ತಂದೆಯೇ ಮೊದಲ ಗುರು ಅವರು ಹೇಳಿಕೊಟ್ಟ ಪ್ರಶ್ನೋತ್ತರಗಳಿಗೆ ಚಟ ಪಟ ಉತ್ತರ ಹೇಳುತ್ತಾ ತಂದೆಗೆ ತಕ್ಕ ಮಗಳು ಎನಿಸಿಕೊಂಡಿದ್ದಾಳೆ.

ಇವರ ತಂದೆ ರಾಮಪ್ಪ ಓದಿದ್ದು ಕೇವಲ ಪಿಯುಸಿ ಮಾತ್ರ, ಆರ್ಥಿಕ ಸ್ಥಿತಿ ಸರಿಯಿರದೇ ಶಾಲೆ ಬಿಟ್ಟ ಇವರು ತಮ್ಮ ಮಗಳಾದ್ರೂ ವಿದ್ಯಾವಂತೆಯಾಗ್ಲಿ, ಏನಾದ್ರೂ ಸಾಧನೆ ಮಾಡಲಿ ಎಂದು ಲಾಕ್ ಡೌನ್ ಅವಧಿಯಲ್ಲಿ ಅಕ್ಷರ ಭೋದನೆ ಮಾಡಿ ಇಂದು ರಾಜ್ಯ, ರಾಷ್ಟ್ರ, ಕವಿ, ಕಾವ್ಯ, ವಿಜ್ಞಾನದ ಪ್ರಶ್ನೆಗಳಿಗೆ ಉತ್ತರ ಹೇಳ್ತಾಳೆ. ಸಂತ ಶಿಶುನಾಳ ಶರೀಫರ ಪದ ಹಾಡುತ್ತಾಳೆ ಅದು ತನ್ನ ಮೂರುವರೆ ವರ್ಷಕ್ಕೆ.

ಈ ಬಾಲಕಿ ಮೂರು ವರ್ಷದಲ್ಲಿನ ಜ್ಞಾನ ಸ್ಥಳೀಯ ಮಕ್ಕಳನ್ನೂ ಸಹ ಅಭ್ಯಾಸದೆಡೆಗೆ ಪ್ರೇರೆಪಿಸಿದ್ರೇ, ತಮ್ಮ ಮಗಳು ಮಧುವಿನ ಸಾಧನೆ ಕಂಡು ಪೋಷಕರು ಸಹ ಖುಷ್ ಆಗಿದ್ದಾರೆ.

ಇನ್ನೂ ವಿಶೇಷ ಏನಂದ್ರೇ, ಈ ಬಾಲಕಿ ಕಳೆದ ಎರಡು ದಿನಗಳಿಂದ ಅಂಗನವಾಡಿಗೆ ಹೊರಟಿದ್ದು, ಅಲ್ಲಿಯೂ ಸಹ ಇತರ ಮಕ್ಕಳಿಗೆ ಮಾದರಿಯಾಗಿ ಭವಿಷ್ಯದಲ್ಲಿ ತಂದೆ ಆಸೆಯಂತೆ ಜಿಲ್ಲಾಧಿಕಾರಿ ಆಗುವ ಕನಸು ಕಂಡು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಅಭ್ಯಾಸ ಮುಂದುವರೆಸಿದ್ದಾಳೆ.

ಶ್ರೀಧರ ಪೂಜಾರ,ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

15/11/2021 08:04 pm

Cinque Terre

66.4 K

Cinque Terre

10

ಸಂಬಂಧಿತ ಸುದ್ದಿ