ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಂಗಳಮುಖಿಯರ ಕನ್ನಡ ರಾಜ್ಯೋತ್ಸವ ಹೇಗಿತ್ತು ಗೊತ್ತೇ ?

ವರದಿ: ರೇವನ್ ಪಿ.ಜೇವೂರ್ ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವ ಇಡೀ ನಾಡಲ್ಲಿ ಆಚರಿಸಲಾಗುತ್ತಿದೆ. ಆದರೆ ಕನ್ನಡ ನಾಡಿನಲ್ಲಿಯೇ ಇರೋ ಆ ಮಂಗಳ ಮುಖಿಯರ ಕನ್ನಡ ರಾಜ್ಯೋತ್ಸವ ಹೇಗಿದೆ. ಅವರೂ ರಾಜ್ಯೋತ್ಸವನ್ನ ಸೆಲೆಬ್ರೇಟ್ ಮಾಡುತ್ತಾರೇಯೇ ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಒಂದು ಸ್ಟೋರಿ ನೋಡಿ.

ಬೇಡಿದರೇನೇ ಎಲ್ಲ. ಇಲ್ಲ ಅಂದ್ರೆ ಏನೂ ಇಲ್ಲ. ಇದು ಕಿನ್ನರ ಅಥವಾ ಮಂಗಳಮುಖಿಯರ ಜೀವನದ ಒನ್ ಲೈನ್ ಸ್ಟೋರಿ.ಇವರ ಕನ್ನಡ ರಾಜ್ಯೋತ್ಸವ ಹೇಗಿದೆ ಅಂತ ನೋಡಿದ್ರೆ ಅಲ್ಲಿ ಏನೂ ಇಲ್ಲ. ಎಂದಿನಂತೆ ಅವರು ಭಿಕ್ಷೆ ಬೇಡುತ್ತಿದ್ದಾರೆ.

ಮಂಗಳಮುಖಿಯರಾದ ಇವರಿಗೆ ಕನ್ನಡ ಬರೋದಿಲ್ಲ. ಆದರೂ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ. ಮತ್ತದೆ ಗೋಳು, ಮತ್ತದೆ ನೋವಿನ ಮಾತುಗಳು ಇವರಿಂದ ಕೇಳಿ ಬರುತ್ತವೆ. ಆದರೂ Life is Good ಅನ್ನೋ ಅರ್ಥದಲ್ಲಿಯೇ ಮಾತನಾಡ್ತಾರೆ.ಕೇಳಿ.

ಹುಬ್ಬಳ್ಳಿ ನವನಗರದ ಅಂಗಡಿಯೊಂದರ ಮುಂದೆ ಸಿಕ್ಕ ಈ ಮಂಗಳ ಮುಖಿಯರು ಭಿಕ್ಷೆ ಬೇಡೋದೇ ನಮ್ಮ ಧರ್ಮ. ಇದೇ ನಮ್ಮ ಕರ್ಮ ಅನ್ನೋ ಅರ್ಥದಲ್ಲಿಯೇ ಈಗ ಜೀವನ ಸಾಗಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/11/2021 04:01 pm

Cinque Terre

21.28 K

Cinque Terre

3

ಸಂಬಂಧಿತ ಸುದ್ದಿ