ಜಮ್ಮು-ಕಾಶ್ಮೀರದ ಶ್ರೀನಗರ ಈಗಲೂ ಸೇಫ್ ಆಗಿದಿಯಾ. ಬೈಕರ್ ಗಳು ಅಲ್ಲಿಗೆ ಸೇಫ್ ಆಗಿ ಹೋಗಿ ಬರಬಹುದಾ ? ಧಾರವಾಡದಿಂದ ಜಮ್ಮುಕಾಶ್ಮೀರ್ ಗೆ ತೆರಳಿದ್ದ ಯುವ ಬೈಕರ್ ವಿಜೇತಕುಮಾರ್ ಗೆ ಆದ ಅನುಭವಗಳೇನು. ಕರ್ನಾಟಕ ಮತ್ತು ಇಂಡಿಯಾದ ಧ್ವಜ ತೆಗೆದುಕೊಂಡು ಹೋದ ವಿಜೇತಕುಮಾರ್ ಗೆ ಶ್ರೀನಗರ ಸಮೀಪದ ಸ್ಥಳೀಯರು ಮಾಡಿದ್ದೇನು..? ಅದ್ಹಾಗೆ ವಿಜೇತಕುಮಾರ್ ಇದೇ ಅಕ್ಟೋಬರ್-5 ರಂದು ಕೋವಿಡ್ ಜಾಗೃತಿ ಮೂಡಿಸಲೆಂದೇ ಸೀದಾ ಸಾದ 97-CC ಹೋಂಡಾ ಬೈಕ್ ತೆಗೆದುಕೊಂಡು, ಗೆಳೆಯ ರಫೀಕ್ ಜೊತೆಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬೈಕ್ ರೈಡಿಂಗ್ ಮಾಡಿದ್ದಾರೆ. ಈ ಮೂಲಕ ಟ್ರಕ್ ಡ್ರೈವರ್ಸ್ ಮತ್ತು ಬುಡಕಟ್ಟು ಜನಾಂಗಕ್ಕೆ ಕೋವಿಡ್ ಜಾಗೃತಿ ಮೂಡಿಸಿ,ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ್ದಾರೆ. ಸದ್ಯ KtoK ಜಾಗೃತಿ ರೈಡಿಂಗ್ ಮುಗಿಸಿಕೊಂಡು ಧಾರವಾಡಕ್ಕೂ ವಾಪಾಸ್ ಆಗಿದ್ದಾರೆ.
ಜಾಗೃತಿ ಮೂಡಿಸೋ ಹಾದಿಯಲ್ಲಿ ತಮಗಾದ ಅನುಭವಗಳನ್ನ PublicNext ಜೊತೆಗೆ Exclusive ಆಗಿಯೇ ವಿಜತೇಕುಮಾರ್ ಹಂಚಿಕೊಂಡಿದ್ದಾರೆ. ಬನ್ನಿ,ನೋಡೋಣ
Kshetra Samachara
30/10/2021 06:28 pm