ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬಿಟ್ಟು ಹೋಗಿದ್ದ 65 ಸಾವಿರ ರೂ. ನಗದು ಹಾಗೂ ಮಹತ್ವದ ದಾಖಲೆಗಳಿದ್ದ ಬ್ಯಾಗ್‌ ಅನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ನಗರದ ಕಮರಿಪೇಟೆ ನಿವಾಸಿ ಸೀರೆ ವ್ಯಾಪರಿ ಶ್ರೀನಿವಾಸ ಹಬೀಬ ಎಂಬವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಗ್ರಾಮಾಂತರ 3ನೇ ಘಟಕದ ಎಫ್ 3110 ಸಂಖ್ಯೆಯ ರಾಜಹಂಸ ಬಸ್‌ನಲ್ಲಿ ಬಂದಿದ್ದರು. ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಇತರೆ ಲಗ್ಗೇಜ್‌ನೊಂದಿಗೆ ಇಳಿಯುವಾಗ ಅಪಾರ ನಗದು ಹಣ ಹಾಗೂ ಮಹತ್ವದ ದಾಖಲೆಗಳಿದ್ದ ಒಂದು ಬ್ಯಾಗ್‌ ಅನ್ನು ಬಸ್‌ನಲ್ಲಿಯೇ ಮರೆತು ಬಿಟ್ಟಿದ್ದರು.

ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಚಾಲಕ ಜಗದೀಶ್ ಹಾಗೂ ನಿರ್ವಾಹಕಿ ಎಸ್.ವಿ.ಹಳ್ಳಿಕಟ್ಟಿಮಠ ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದ ನಂತರ ಬಸ್‌ ಅನ್ನು ನಿ‌ಲ್ದಾಣದಿಂದ ಘಟಕಕ್ಕೆ ತಂದು ದುರಸ್ತಿ ಮಾಡಿಸಿಕೊಂಡು ಮತ್ತೆ ಬೆಳಗಾವಿಗೆ ಹೋಗಿ ಹುಬ್ಬಳ್ಳಿಗೆ ಬಂದಿದ್ದಾರೆ. ರಾತ್ರಿ 8ಕ್ಕೆ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ. ಬಸ್‌ ಅನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ತಪಾಸಣೆ ಮಾಡುವುದು ಚಾಲಕ, ನಿರ್ವಾಹಕರ ಕೆಲಸ. ಎಂದಿನಂತೆ ತಪಾಸಣೆ ಮಾಡುವಾಗ ಒಂದು ಬ್ಯಾಗ ಇರುವುದನ್ನು ಗಮನಿಸಿದ್ದಾರೆ. ಅದನ್ನು ಘಟಕ ವ್ಯವಸ್ಥಾಪಕರಿಗೆ ಒಪ್ಪಿಸಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ 65,520 ರೂ. ನಗದು, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ಮತ್ತಿತರ ಮಹತ್ವದ ದಾಖಲೆಗಳಿರುವುದು ಕಂಡುಬಂದಿದೆ.

ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮ ಚಾಲಕ- ನಿರ್ವಾಹಕರ ಮೂಲಕ ಬ್ಯಾಗ್‌ ಅನ್ನು ಪ್ರಯಾಣಿಕರಿಗೆ ಮರಳಿಸಲಾಯಿತು. ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್.ಮುಜುಂದಾರ, ವಿಭಾಗಿಯ ತಾಂತ್ರಿಕ ಶಿಲ್ಪಿ ಪ್ರವೀಣ ಈಡೂರ, ಆಡಳಿತಾಧಿಕಾರಿ‌ ನಾಗಮಣಿ, ಘಟಕ ವ್ಯವಸ್ಥಾಪಕ ಬಸಪ್ಪ ಪೂಜಾರಿ ಮತ್ತಿತರರು ಇದ್ದರು.

Edited By : Vijay Kumar
Kshetra Samachara

Kshetra Samachara

27/10/2021 11:16 pm

Cinque Terre

13.07 K

Cinque Terre

4

ಸಂಬಂಧಿತ ಸುದ್ದಿ