ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ 2 ಗಂಟೆಯಲ್ಲಿ ಮರಳಿ ಸಿಕ್ತು 10 ಸಾವಿರ ಹಣ

ಕುಂದಗೋಳ : ಪಟ್ಟಣದ ಎಸ್.ಬಿ.ಐ ಶಾಖೆಯಲ್ಲಿ ಕಳೆದ ಸೆಪ್ಟೆಂಬರ್ 27 ರಂದು ಯಾರೋ ಡ್ರಾ ಮಾಡಿದ ಹಣ ತಾಂತ್ರಿಕ ದೋಷದ ಕಾರಣ ಹಣ ಡ್ರಾ ಮಾಡಿದ ವ್ಯಕ್ತಿ ಮರಳಿದ ಬಳಿಕ ತಡವಾಗಿ ಡ್ರಾ ಆಗಿ ಬಸನಗೌಡ ಪಾಟೀಲ್ ಎಂಬುವವರ ಕೈ ಸೇರಿತ್ತು.

ಆ ಹಣವನ್ನು ಬಸನಗೌಡ ಪಾಟೀಲ್ ಸೂಕ್ತ ಮಾಹಿತಿ ಇದ್ದವರು ಬಂದಲ್ಲಿ ಹಣಕೊಡಲು ನಾನು ಸಿದ್ಧ ಎಂದು ನಿನ್ನೆ ಗುರುವಾರ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದರು, ಈ ಸುದ್ಧಿ ಪ್ರಕಟವಾದ ಎರಡೆ ಗಂಟೆಗಳಲ್ಲಿ ಎಸ್.ಬಿ.ಐ ಬ್ಯಾಂಕ್ ಅಧಿಕಾರಿಗಳು ಬಸನಗೌಡ ಪಾಟೀಲ್ ಎಂಬುವವರ ಮೂಲಕ ಹಣವನ್ನು ಎಟಿಎಂ'ನಲ್ಲಿ ಬಿಟ್ಟು ಹೋದ ಎನ್.ವಿ.ಪಾಟೀಲ ತಲುಪಿಸಿದ್ದಾರೆ.

ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಆಧಾರಿಸಿ ಹಣ ಕಳೆದುಕೊಂಡ ವ್ಯಕ್ತಿ ಹಣ ಮರಳಿ ಪಡೆದ್ರೇ, ಹಣ ಸಿಕ್ಕರೂ ದುರಾಸೆಗೆ ಒಳಗಾಗದೆ ಹಣ ಮರಳಿ ನೀಡಿದ ಬಸನಗೌಡ ಪಾಟೀಲರ ಬಗ್ಗೆ ಮೆಚ್ಚುಗೆ ಮಾತು ಕೇಳಿ ಬರುತ್ತಿವೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

22/10/2021 12:14 pm

Cinque Terre

25.17 K

Cinque Terre

3

ಸಂಬಂಧಿತ ಸುದ್ದಿ