ಚೆನ್ನಮ್ಮನ ಕಿತ್ತೂರು: ಸಾಲಬಾಧೆಯಿಂದ ನೇಕಾರನೊಬ್ಬ ನೇಣಿಗೆ ಕೊರೊಳೊಡ್ಡಿದ ಘಟನೆ ಇತ್ತೀಚೆಗೆ ನಡೆದಿದ್ದು, ಆ ಕುಟುಂಬಕ್ಕೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈಲಪ್ಪ ದಳವಾಯಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಚೆನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ ವೀರಣ್ಣ ಇಟಗಿ (35) ಎಂಬುವವರು ವೃತ್ತಿಯಿಂದ ನೇಕಾರರಾಗಿದ್ದರು. ಇತ್ತೀಚೆಗೆ ವಿದ್ಯುತ್ ಮಗ್ಗದಲ್ಲಿ ಕೈ ಸಿಕ್ಕಿದ್ದರಿಂದ ವೀರಣ್ಣ ಅವರು ತಮ್ಮ ಬಲಗೈಯನ್ನೇ ಕಳೆದುಕೊಂಡಿದ್ದರು. ಇದರ ಚಿಕಿತ್ಸೆಗಾಗಿ ಕುಟುಂಬಸ್ಥರು ಸಾಲ, ಶೂಲ ಮಾಡಿದ್ದರು. ಬಲಗೈ ಕಳೆದುಕೊಂಡಿದ್ದರಿಂದ ಹಾಗೂ ಸಾಲ ಆಗಿದ್ದರಿಂದ ಮನನೊಂದ ವೀರಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ನೇಕಾರನ ಕುಟುಂಬದ ನೆರವಿಗೆ ಬರಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಮೃತ ಈರಣ್ಣ ಅವರಿಗೆ ಇಬ್ಬರು ಮಕ್ಕಳು ಸಹ ಮಕ್ಕಳು ಇದ್ದು, ಪತ್ನಿ, ತಾಯಿ ಇದ್ದಾರೆ. ಪುಟ್ಟ ಮನೆಯೇ ಇವರಿಗೆ ಆಸರೆ, ನೇಕಾರನೇ ಸಾವಿಗೀಡಾದ ಮೇಲೆ ಸಾಲ ಹೊತ್ತುಕೊಂಡು ಇವರು ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಹೀಗಾಗಿ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಬೈಲಪ್ಪ ದಳವಾಯಿ ಆಗ್ರಹಿಸಿದರು.
Kshetra Samachara
09/10/2021 07:23 pm