ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಈಗಿನ ಕಾಲದ ಮಕ್ಕಳಲ್ಲಿ ಎಲ್ಲವೂ ಇದ್ದರೂ ಸಹ, ಮೊಬೈಲ್ ಟಿವಿ ಎಂದು ಕಾಲಹರಣ ಮಾಡುತ್ತಿರುವುದು ಸಾಮನ್ಯ, ಆದರೆ ತಂದೆ ಸೆಕ್ಯುರಿಟಿ ಇದ್ರೂ ಸಹ ಎದೆಗುಂದದ ಬಾಲಕಿಯೊಬ್ಬಳ್ಳು, ಈಗ ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆ ಬಾಲಕಿ ಸಾಧನೆ ಹೇಗಿದೆ ಎಂಬುದನ್ನು ತೋರಸ್ತೇವಿ ನೋಡಿ....
ಹೀಗೆ ವಿವಿಧ ಬಂಗಿಯಲ್ಲಿ ಹಗ್ಗದ ಮಲ್ಲಕಂಬ ಮಾಡುತ್ತಿರುವ ಈ ಪುಟ್ಟ ಬಾಲಕಿಯ ಹೆಸರು ಸವೀತಾ ಸುರೇಶ್ ಕರೆನ್ನವರ. ನವನಗರದ ರೋಟರಿ ಸ್ಕೂಲ್‌ದಲ್ಲಿ, 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವರ ತಂದೆ ಅದೇ ಶಾಲೆಯಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ನವಲಗುಂದ ನಿವಾಸಿಯಾದ ಇವರು, ಹುಬ್ಬಳ್ಳಿಯಲ್ಲಿ ಸೆಕ್ಯುರಿಟಿಯಾಗಿ 8 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಈಗ ಮಗಳು ಹಗ್ಗದ ಮಲ್ಲಕಂಬದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಕ್ಕೆ ಪಾಲಕರು ಮತ್ತು ಕೋಚ್ ಸಂತಸ ವ್ಯಕ್ತಪಡಿಸಿದ್ದಾರೆ.
ತುಂಬ ಬಡತನದಲ್ಲಿ ಜನಿಸಿದರು ಸಹ, ಪೋಷಕರು ಹಾಗೂ ಶಿಕ್ಷಕರು ಈ ಬಾಲಕಿ ಸಾಧನ ಶಿಖರ ಏರಲಿ ಎಂದು ಬೆನ್ನೆಲುಬಾಗಿ ನಿಂತಿದ್ದಾರೆ. ಇದೇ ಸೆಪ್ಟೆಂಬರ್ 26 ರಂದು ಮಧ್ಯಪ್ರದೇಶದ ಉಜ್ಜೆನದಲ್ಲಿ ರಾಷ್ಟ್ರ ಮಟ್ಟದ ಹಗ್ಗದ ಮಲ್ಲಕಂಬ ಸ್ಪರ್ಧೆ ಇರುವ ಹಿನ್ನೆಲೆಯಲ್ಲಿ, ಸವೀತಾ ಫುಲ್ ತಯಾರಿ ನಡೆಸಿದ್ದಾಳೆ. ಈ ಹಗ್ಗದ ಮಲ್ಲಕಂಬದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ದೇಶ ರಾಜ್ಯ ಮತ್ತು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಬೇಕೆನ್ನುವ ಗುರಿ ಹೊಂದಿದ್ದಾಳೆ ಈ 12 ರ ಪೋರಿ.
ಒಟ್ಟಿನಲ್ಲಿ ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿಯಿಂದ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲು ಹೊರಟಿರುವ ಸವೀತಾಗೆ ಸಹಪಾಠಿಗಳು, ಶಾಲೆಯ ಶಿಕ್ಷಕರು ಆಲ್ ದಿ ಬೆಸ್ಟ ಹೇಳಿ ಶುಭಹಾರೈಸಿದ್ದಾರೆ...
Kshetra Samachara
23/09/2021 03:48 pm