ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲ್ಯಾಪ್‌ಟಾಪ್ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಬೇಕರಿ ಸಿಬ್ಬಂದಿ

ಹುಬ್ಬಳ್ಳಿ: ಇಂದಿನ ಯುಗದಲ್ಲಿ ಕಳ್ಳತನ, ದರೋಡೆ, ಸುಲಿಗೆ ಸಾಮಾನ್ಯವಾಗಿವೆ. ಆದರೆ ಇಲ್ಲೊಬ್ಬರು ಸಿಕ್ಕಿರುವ ವಸ್ತುಗಳಿರುವ ಬ್ಯಾಗ್ ನ್ನು ಕಳೆದುಕೊಂಡವರಿಗೆ ಗುರುತಿಸಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೌದು, ನಗರದ ಚನ್ನಮ್ಮ ವೃತ್ತದಲ್ಲಿನ ಕಾಮತ್ ಬೇಕರಿಯಲ್ಲಿ ಕೆಲಸ ಮಾಡುವ ಜಾನು ಬಾಬುವಾಡಿ ಅವರೇ ಬೇಕರಿ ಹತ್ತಿರ ಸಿಕ್ಕಿರುವ ಬ್ಯಾಗ್ ನ್ನು ಮರಳಿಸಿ ಕೊಟ್ಟು ಮೆಚ್ಚುಗೆ ಗಳಿಸಿದ್ದಾರೆ.

ಹುಬ್ಬಳ್ಳಿ ಸಾಯಿನಗರದ ನಿವಾಸಿ ಬಾರ್ಗವಿ ಎಂಬುವವರು ಹೈದರಾಬಾದ್ ನಿಂದ ಬಸ್ಸಿನ ಮೂಲಕ ಹುಬ್ಬಳ್ಳಿಗೆ ಆಗಮಿಸಿದರು. ಈ ವೇಳೆ ಮನೆಗೆ ಸಿಹಿ ತೆಗೆದುಕೊಂಡು ಹೋಗಲು ಬೇಕರಿಗೆ ಆಗಮಿಸಿ ಅಲ್ಲಿಯೇ ಬ್ಯಾಗ್ ಬಿಟ್ಟು ಮನೆಗೆ ತೆರಳಿದ್ದಾರೆ. ನಂತರ ಬ್ಯಾಗ್ ನೆನಪಿಗೆ ಬಂದು ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಬೇಕರಿ ಸಿಬ್ಬಂದಿ ಬಿಟ್ಟು ಹೋಗಿದ್ದ ಬ್ಯಾಗ್ ನ್ನು ಉಪನಗರ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರನ್ ಅವರ ನೇತೃತ್ವದಲ್ಲಿ, ಮರಳಿ ಬ್ಯಾಗ್ ನೀಡಿ ಪ್ರಮಾಣಿಕತೆ ಮೆರೆದಿದ್ದಾರೆ. ಬೇಕರಿಯ ಸಿಬ್ಬಂದಿಯ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Edited By : Shivu K
Kshetra Samachara

Kshetra Samachara

21/09/2021 03:03 pm

Cinque Terre

22.31 K

Cinque Terre

0

ಸಂಬಂಧಿತ ಸುದ್ದಿ