ಹುಬ್ಬಳ್ಳಿ- ನಗರದ ಗುಜರಾತ್ ಭವನದ ಪಕ್ಕದ ರಾಜಕಾಲುವೆ ಬಳಿ ಜಿಯೋ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ವೇಳೆ, ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕನನ್ನು ಇತರ ಕಾರ್ಮಿಕರು ಹಾಗೂ ಉಪನಗರ ಠಾಣೆ ಪೊಲೀಸರು ರಕ್ಷಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಒನ್ನಳ್ಳಿ ಗ್ರಾಮದ ನಿವಾಸಿ ಶಿವಪ್ಪ ಯಲ್ಲಪ್ಪ ವಜರಿತ್ತಿ ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕನಾಗಿದ್ದು, ಜಿಯೋ ಕಂಪನಿ ವತಿಯಿಂದ ಭೂಗತ ಕೇಬಲ್ ಅಳವಡಿಕೆ ಮಾಡಲಾಗುತ್ತಿರುವ ಸಂದರ್ಭದಲ್ಲಿ, ಕಾಮಗಾರಿಗಾಗಿ ರಾಜಕಾಲುವೆ ಪಕ್ಕದಲ್ಲಿ ಗುಂಡಿ ತೆಗೆಯಲಾಗಿತ್ತು, ಗುಂಡಿಯಲ್ಲಿದ್ದ ಮಣ್ಣು ಎತ್ತಿ ಮೇಲೆ ಹಾಕುವಾಗ ತೇವಾಂಶದಿಂದ ಕೂಡಿದ್ದ ಭಾಗದಲ್ಲಿ ಕಾರ್ಮಿಕನ ಕಾಲು ಸಿಲುಕಿಕೊಂಡು ಮಣ್ಣಿನಲ್ಲಿ ಸಿಲುಕಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪಿಎಸ್‌ಐ ಅಶೋಕ ಬಿಎಸ್‌ಪಿ ಹಾಗೂ ಸಿಬ್ಬಂದಿ ಇತರ ಕಾರ್ಮಿಕರ ಸಹಾಯದಿಂದ, ಶಿವಪ್ಪನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ, ಮತ್ತೊಮ್ಮೆ ಪೊಲೀಸರು ಜನರ ರಕ್ಷಣೆಗೆ ಸದಾ ಸಿದ್ದ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
Kshetra Samachara
18/09/2021 07:01 pm