ಕುಂದಗೋಳ : ನನಗೆ ಗಂಡ ಮಕ್ಕಳು ಯಾರು ಇಲ್ಲಾ, ನನ್ನ ಮನೆ ಪಕ್ಕದ ಸ್ಥಳೀಯ ಕೆಲ ನಿವಾಸಿಗಳಿಂದ ನನಗೆ ತೊಂದರೆ ಉಂಟಾಗುತ್ತಿದೆ ನಾನು ಯಾರಿಗೆ ಹೇಳಲಿ ಎಂದು ವೃದ್ಧೆಯೊಬ್ಬರು ತಹಶೀಲ್ದಾರನ್ನೇ ಭೇಟಿ ಮಾಡಿ ರಕ್ಷಣೆ ಕೋರಿದ ಘಟನೆ ಕುಂದಗೋಳ ಪಟ್ಟಣದಲ್ಲಿಂದು ನಡೆಯಿತು.
ಕುಂದಗೋಳ ಪಟ್ಟಣದ ವೃದ್ಧೆಯೋರ್ವಳು ತಹಶೀಲ್ದಾರ ಕಚೇರಿ ಬಿಟ್ಟು ಕದಲದೆ ಕುಳಿತಿದ್ದನ್ನು ಗಮನಿಸಿದ ಸಿಬ್ಬಂದಿಗಳು ವೃದ್ಧೆಯನ್ನು ವಿಚಾರಿಸಿದಾಗ ವೃದ್ಧೆ ತಹಶೀಲ್ದಾರ ಭೇಟಿ ಮಾಡುವ ವಿಚಾರ ತಿಳಿಸಿದ್ದಾಳೆ.
ಅದರಂತೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ವೃದ್ಧೆಯನ್ನು ತಮ್ಮ ಕೊಠಡಿಗೆ ಕರೆಸಿ ವಿಚಾರಿಸಿದಾಗ ವೃದ್ಧೆ ಅರ್ಧ ಗಂಟೆ ತನ್ನ ಸಮಸ್ಯೆ ತಿಳಿಸಿದ್ದಾಳೆ, ಬಳಿಕ ತಹಶೀಲ್ದಾರ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ಮಾಡಿ ವೃದ್ಧೆಯನ್ನು ಅವರ ಮನೆಗೆ ತಲುಪಿಸಿ ಅವರ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ತಹಶೀಲ್ದಾರ ಕಚೇರಿಗೆ ಆಗಮಿಸಿದ ಪೊಲೀಸರು ವೃದ್ಧೆಗೆ ಸಾಂತ್ವನ ಹೇಳಿ ಯಾರು ತೊಂದರೆ ಕೊಡುತ್ತಾರೆಂದು ಪ್ರಶ್ನಿಸಿ ಮಾಹಿತಿ ಪಡೆದು ಕೊನೆಗೆ ಆಟೋ ಕರೆಸಿ ವೃದ್ಧೆಯನ್ನು ಮನೆ ತಲುಪಿಸಿ ಮಾನವೀಯತೆ ಮೆರೆದರು.
Kshetra Samachara
15/09/2021 11:25 am