ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಾಯಿ ಮಂಗಕ್ಕೆ ಕಚ್ಚಿದ ಪರಿಣಾಮ ಮಂಗವೂಂದು ಗಾಯಗೊಂಡಿದರಿಂದ ಶಿಗ್ಲಿ ಗ್ರಾಮದ ನಿವಾಸಿ ಪ್ರದೀಪ ಕುರಿ ಎಂಬುವರು ಮಂಗವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಗಾಯಗೊಂಡ ಮಂಗಕ್ಕೆ ಬಾಳೆಹಣ್ಣು ಎಳ್ಳನೀರು ಕೊಟ್ಟು ಮೂರು ದಿನಗಳವರೆಗೆ ಜೋಪಾನ ಮಾಡಿದ್ದಾನೆ. ನಂತರ ಮಂಗವೂ ಚೇತರಿಸಿಕೊಳ್ಳದೆ ಇರುವುದರಿಂದ ಶಿಗ್ಲಿ ಗ್ರಾಮದ ಪಶು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಹೋಗಿದ್ದು,ಅಲ್ಲಿ ವೈದ್ಯರು ಯಾರು ಇಲ್ಲದ ಕಾರಣ ಶಿಗ್ಲಿಯಿಂದ ಲಕ್ಷ್ಮೇಶ್ವರ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಚಿಕ್ಸಿತೆ ಕೊಡಿಸಿದ್ದಾನೆ. ನಂತರ ಮಂಗವನ್ನು ಎತ್ತಿಕೊಂಡು ಪೊಲೀಸ್ ಠಾಣೆಗೆ ಬಂದು ಶಿಗ್ಲಿ ಗ್ರಾಮದಲ್ಲಿ ಪಶು ಆಸ್ಪತ್ರೆಯಲ್ಲಿ ವೈದರೇ ಇಲ್ಲ ಆದರಿಂದ ನಾನು ಶಿಗ್ಲಿಯ ಪಶು ಆಸ್ಪತ್ರೆಯ ಮೇಲೆ ದೊರು ದಾಖಲಿಸಲು ಬಂದಿದೇನೇ ಎಂದು ಪೊಲೀಸ್ ಮುಂದೆ ಹೇಳಿದ್ದಾನೆ ಇದು ವಿಚಿತ್ರ ಆದರೂ ಸತ್ಯವಾಗಿದೆ.
ಮಂಗವನ್ನು ಮೂರು ದಿನಗಳ ಕಾಲ ಪೋಷಿಸಿರುವ ಕಾರ್ಯಕ್ಕೆ ಪೊಲೀಸರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
11/09/2021 03:34 pm