ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಟೋದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಹುಬ್ಬಳ್ಳಿ: ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ, ಮೊಬೈಲ್ ನ್ನು ವಾರಸುದಾರರಿಗೆ ಮರಳಿಸಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹೌದು, ಆಟೋ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಸದಸ್ಯರಾದ ಆಟೋ ಚಾಲಕ ಮಂಜುನಾಥ ಲಕ್ಷ್ಮಣ್ ಬಳ್ಳಾರಿ ಅವರೇ ಫೋನ್ ಮರಳಿಸಿದ್ದು, ಇಂದು ಬೆಳಿಗ್ಗೆ ಶೈಲಜಾ ಕುಲಕರ್ಣಿ ಎಂಬುವವರ ತಂದೆ ಮಂಜುನಾಥ್ ಬಳ್ಳಾರಿ ಅವರ ಆಟೋದಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಮೊಬೈಲ್ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿ ಮಂಜುನಾಥ್ ನವನಗರ ಪೊಲೀಸ್ ಠಾಣೆಗೆ ಹೋಗಿ ಶೈಲಜಾ ಕುಲಕರ್ಣಿ ಅವರಿಗೆ ಮೊಬೈಲನ್ನು ಮರಳಿ ನೀಡಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಉಪಾಧ್ಯಕ್ಷರಾದ ಚಿದಾನಂದ ಸವದತ್ತಿ ಮತ್ತು ನಾಗರಾಜ್ ಕಬ್ಬೇರ್ ಬಸವರಾಜ್ ಹೊಂಬಳ ಅವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

22/08/2021 11:26 am

Cinque Terre

31.68 K

Cinque Terre

8

ಸಂಬಂಧಿತ ಸುದ್ದಿ