ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಕಸದಲ್ಲಿ ರಸ ತೆಗೆದ ಲಕ್ಷ್ಮೇಶ್ವರ ಠಾಣೆ ಪೊಲೀಸರು: ಉದ್ಯಾನವನ ನಿರ್ಮಾಣ ಮಾಡಿದ ಖಾಕಿ...!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವಸತಿ ಗೃಹಗಳು ಹಾಗೂ ಮಕ್ಕಳ ಉದ್ಯಾನವನವನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್. ಎನ್ ಉದ್ಘಾಟಿಸಿದರು.

ಶಿರಹಟ್ಟಿ ವೃತ್ತದ ಸಿ.ಪಿ.ಐ ವಿಕಾಶ ಲಮಾಣಿ ಹಾಗೂ ಲಕ್ಷ್ಮೇಶ್ವರ ಪಿ.ಎಸ್.ಐ ಪ್ರಕಾಶ. ಡಿ ಅವರ ನೇತೃತ್ವದಲ್ಲಿ ನಿರ್ಮಿಸಿದ ಉದ್ಯಾನವು ಎಲ್ಲರ ಗಮನ ಸೆಳೆಯುವಂತಾಗಿದೆ. ಈ ಜಾಗವೂ ಮೊದಲು ಪಾಳು ಬಿದ್ದು ಅಕ್ಕಪಕ್ಕ ಜನರಿಗೆ ಬಯಲು ವಿಸರ್ಜನೆ ಮಾಡಲು ಅನುಕೂಲವಾಗಿತ್ತು ಇದನ್ನು ಗಮನಿಸಿದ ಸಿ.ಪಿ.ಐ.ವಿಕಾಶ ಲಮಾಣಿ ಈ ಜಾಗದಲ್ಲಿ ಒಂದು ಸುಂದರವಾದ ಉದ್ಯಾನವನ ಮಾಡಬೇಕು ಎನ್ನುವ ಛಲವನ್ನು ಹೊಂದಿದ್ದು, ಅದರಂತೆ ಈಗ ಈ ಜಾಗದಲ್ಲಿ ಸುಂದರವಾದ ಮಕ್ಕಳು ಆಡುವ ಹಾಗೂ ಸಾರ್ವಜನಿಕರು ಸಾಯಂಕಾಲ ಬಂದು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕಾಂಪೌಂಡ್ ಸುತ್ತಲೂ ಸುಂದರವಾದ ಕಲಾಕೃತಿಯ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಹೇಳಿದರು.

ಅಸ್ವಚ್ಛತೆಯಿಂದ ಕೂಡಿದ್ದ ಈ ಜಾಗವನ್ನು ಪೊಲೀಸ್ ಸಿಬ್ಬಂದಿಗಳು ವಿಕಾಶ ಲಮಾಣಿ ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿ ಮಕ್ಕಳಿಗೆ ಆಡುವ ಉದ್ಯಾನವನ ಮಾಡಿ ಇತರೆ ಪೋಲಿಸ್ ಠಾಣೆಗೆ ಮಾದರಿಯಾಗಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

11/08/2021 01:45 pm

Cinque Terre

52.46 K

Cinque Terre

0

ಸಂಬಂಧಿತ ಸುದ್ದಿ