ಹುಬ್ಬಳ್ಳಿ: ಅನಾಥ ಹೆಣ್ಣು ಮಗಳು ಒಬ್ಬಳು ಮೂರ್ಛೆ ಬಿದ್ದು, ಒದ್ದಾಡುತ್ತಿರುವಾಗ ಮಾಹಿತಿ ತಿಳಿದು ಉಪನಗರ ಪೊಲೀಸ್ ಠಾಣೆಯ ಹೊಯ್ಸಳ 6 ಸಿಬ್ಬಂದಿ ಆ ಹೆಣ್ಣು ಮಗಳನ್ನು ರಕ್ಷಣೆ ಮಾಡಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ನಿರ್ಗತಿಕ ಹೆಣ್ಣು ಮಗಳೊಬ್ಬಳು, ಅಶಕ್ತವಾಗಿ ನಗರದ ಸರ್ಕ್ಯೂಟ್ ಹೌಸ್ ಮುಂದೆ ಮೂರ್ಛೆ ಬಿದ್ದಿದ್ದಳು ಅದನ್ನು ನೋಡಿದ ಸಾರ್ವಜನಿಕರು, ಕಂಟ್ರೋಲ್ ರೂಂಗೆ ಕರೆ ಮಾಡಿದಾಗ, ತಕ್ಷಣ ಹೊಯ್ಸಳ 6 ಸಿಬ್ಬಂದಿ ಬಂದು, ನೀರು ಕುಡಿಸಿ ಆಂಬುಲೆನ್ಸ್ ಗೆ ಕರೆ ಮಾಡಿ ಕಿಮ್ಸ್ ಚಿಕಿತ್ಸೆ ಕೊಡಿಸಲು, ಮುಂದಾಗಿದ್ದು, ಈ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರಿಂದ ಸಂತಸ ವ್ಯಕ್ತಪಡಿಸಿದ್ದಾರೆ.
Kshetra Samachara
08/08/2021 12:44 pm