ಕುಂದಗೋಳ: ಆಧುನಿಕತೆ ಬೆಳೆದಂತೆ ಯುವಕರಲ್ಲಿ ಹೊಸ ಹೊಸ ಕ್ರೇಜ್ ಹೆಚ್ಚುತ್ತಿವೆ, ಅದರಲ್ಲೂ ಯಾವ ಯಾವ ವ್ಯಕ್ತಿ ಯಾವುದರಲ್ಲಿ ನಿಪುಣ ಎಂದು ಅಂದಾಜಿಸಲಾಗದಷ್ಟು ಕ್ರೇಜ್ ಸಧ್ಯ ಚಾಲ್ತಿಯಲ್ಲಿದೆ.
ಎಸ್..! ಈ ಮಾತಿಗೆ ತಕ್ಕಂತೆ ಇಲ್ಲೊಬ್ಬ ಯುವಕನಿಗೆ ಲಗಾಮು ಇಲ್ಲದೆ ಕುದುರೆ ಓಡಿಸೋ ಕ್ರೇಜ್ ಇದೆ, ಹಾಗೇ ಓಡಿಸ್ತಾನೆ ಕೂಡಾ, ಅಯ್ಯೋ ಇದೇನಪ್ಪಾ ! ಲಗಾಮು ಇಲ್ಲದೆ ಕುದರೆ ಓಡ್ಸೋದಾ ಸಾಧ್ಯವಿಲ್ಲಾ ಬಿಡಿ ಅಂದ್ರಾ, ನಾವು ಸಹ ಹಾಗೇ ಅನ್ಕೊಂಡು ಪ್ರತ್ಯಕ್ಷವಾಗಿ ನೋಡಿದ ಮೇಲೆ ನಂಬಿದ್ದು, ಅಂದಹಾಗೇ ಈ ಲಗಾಮು ಇಲ್ಲದೆ ಕುದುರೆ ಓಡಿಸೋ ಭೂಪನ ಹೆಸರು ಸದಾನಂದ ಯಲಿಗಾರ ಕುಂದಗೋಳ ಪಟ್ಟಣದವ.
ಚಿಕ್ಕಂದಿನಿಂದಲೂ ಪ್ರಾಣಿ ಮೇಲಿರುವ ಪ್ರೀತಿ ಇತನನ್ನು ಮೊದಲು ಕುದುರೆ ಓಡಿಸಲು ಪ್ರೇರೆಪಿಸಿ, ಬಳಿಕ ಕುದುರೆ ಮೇಲೆ ನಿಂತು ಕುದುರೆ ಓಡಿಸುವ ಆಸಕ್ತಿ ತಂದು ಸಧ್ಯ ಲಗಾಮು ಇಲ್ಲದೆ ಕುದುರೆ ಓಡಿಸುವಷ್ಟರ ಮಟ್ಟಿಗೆ ಪರಿಣತಿ ಪಡೆದಿದ್ದು ಇದಕ್ಕಾಗಿ ಈತ ಎಂಟು ವರ್ಷ ಶ್ರಮ ಪಟ್ಟಿದ್ದಾನೆ.
ಇದಲ್ಲದೆ ಈತನಿಗೆ ಸಾಹಸ ಕಲಿಯಲು ಕುಂದಗೋಳ ಪಟ್ಟಣದ ಬಾಬಣ್ಣ ಕಮಡೊಳ್ಳಿ ಎಂಬುವವರು ಕುದುರೆ ನೀಡಿದ್ದು ಸದಾನಂದ ಮನೆ ತುಂಬಾ ಸಲುಗೆಯಿಂದ ಕುದುರೆ ನಡೆದಾಡುವುದು ನಿಜಕ್ಕೂ ಆಶ್ಚರ್ಯವೇ ಸರಿ. ಈ ಕುದುರೆ ಇಲ್ಲದೆ ಬೇರೆ ಕುದುರೆ ಕೊಟ್ರು ವಾರದಲ್ಲಿ ಪಳಗಿಸಿ ಲಗಾಮು ಇಲ್ಲದೆ ಓಡಿಸುತ್ತೇನೆ ಅಂತಾನೆ ಸದಾನಂದ ಆದೇನಿದ್ದರೂ ಈತನ ಪ್ರಯತ್ನಕ್ಕೆ ಬೇಷ್ ಎನ್ನಲೇಬೇಕು ಅಲ್ವಾ.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
06/08/2021 12:22 pm