ಕಲಘಟಗಿ: ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದಲ್ಲಿ ಪಡಿತರ ಚೀಟಿ ನವೀಕರಿಸಲು ಸಾರ್ವಜನಿಕರ ಅಲೆದಾಟ ತಪ್ಪಿಸುವ ಸಲುವಾಗಿ ವಜ್ರಕುಮಾರ ಗೆಳೆಯರ ಬಳಗದಿಂದ ಹೊಸ ಹಾಗೂ ನವೀಕರಣಗೊಂಡ ಕಾರ್ಡ್ ಗಳ ಮುದ್ರಣ ಸೇವೆಯ ವ್ಯವಸ್ಥೆಯನ್ನು ಉಚಿತವಾಗಿ ಮಾಡಿ ಅನುಕೂಲ ಮಾಡಿಕೊಡಲಾಯಿತು.
ಹುಲಕೊಪ್ಪ ಗ್ರಾಮದಲ್ಲಿಯೂ ಸಹ ಒನ್ ನೇಶನ್ ಒನ್ ರೇಷನ್ ಹೊಸ ಕಾರ್ಡ ಉಚಿತವಾಗಿ ಮುದ್ರಿಸಿ ನಂತರ ಕಾರ್ಡ್ ಹಾಳಾಗದಿರಲಿ ಎಂದು ಲ್ಯಾಮಿನೆಷನ್ ಸಹ ಮಾಡಿ ಸಾರ್ವಜನಿಕಗೆ ನೀಡಲಾಯಿತು.
ಕೊರೊನಾ ಸಮಯದಲ್ಲಿ ರೇಷನ್ ಕಾರ್ಡ್ ಪಡೆಯಲು ಬಡ ಜನರು ಅಲೆಯುವುದನ್ನು ತಪ್ಪಿಸಲು ಗ್ರಾಮದಲ್ಲಿ ಕಂಪ್ಯೂಟರ್ ತರಸಿ ಉಚಿತ ರೇಷನ್ ಕಾರ್ಡ್ ಮುದ್ರಣದ ವ್ಯವಸ್ಥೆಯನ್ನು ಗೆಳೆಯರ ಬಳಗದಿಂದ ಕಲ್ಪಿಸಲಾಗಿದೆ.ಗ್ರಾಮದ ಮಹಿಳೆಯರು,ವೃದ್ಧರು ಇದರ ಸದುಪಯೋಗ ಪಡೆದುಕೊಂಡರು ಎಂದು ಮುಖಂಡರಾದ ವಜ್ರಕುಮಾರ ಮಾದನಬಾವಿ ತಿಳಿಸಿದರು.
Kshetra Samachara
03/08/2021 05:07 pm