ಕುಂದಗೋಳ : ಲಾಕ್ ಡೌನ್ ಸಂಕಷ್ಟ ತಾಯಿಯೂ ಕೈ ಬಿಟ್ರೇ ಪರಾಕಷ್ಟ

ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಕುಂದಗೋಳ : ಮನೆಯಲ್ಲಿ ಹಾಸಿಗೆ ಹಿಡಿದ ತಾಯಿ, ಅಣ್ಣನನ್ನು ಕಳೆದುಕೊಂಡು ದು:ಖದಲ್ಲಿರುವ ಅತ್ತೆ, ವಯಸ್ಸಿಗೆ ಬಂದ ಮಕ್ಕಳ ಶಿಕ್ಷಣದ ಹೊರೆ, ಲಾಕ್ ಡೌನ್ ಹೊಡೆತಕ್ಕೆ ಬಾಗಿಲು ಮುಚ್ಚಿದ ಬದುಕಿಗೆ ಆಸರೆಯಾಗಿದ್ದ ಬಿಡಾ ಅಂಗಡಿ ಇದೋ ಶಿರಾಜ್ ಅಹಮ್ಮದಖಾನ್ ಜೀವನದ ಧಾರುಣ ಕಥೆ.

ಹೌದು ! ಕುಂದಗೋಳ ಪಟ್ಟಣದ ಮಸಾರಿ ಪ್ಲಾಟಿನ್ ಇಕ್ಕಟ್ಟಾದ ಬೀದಿಯ ಪುಟ್ಟ ಮನೆ ನಿವಾಸಿ ಶಿರಾಜ್ ಅಹಮ್ಮದಖಾನ್ ಕುಟುಂಬ ಕಷ್ಟದ ಕೂಪದಲ್ಲೇ ಬೆಂದು ಬೆಂಡಾಗಿ ಸದ್ಯ ಹಾಸಿಗೆ ಹಿಡಿದ ತಾಯಿಯೂ ತಮ್ಮನ್ನು ಕೈ ಬಿಟ್ರೇ ಮುಂದೇನು ? ಎಂಬ ಚಿಂತೆ ಕುಟುಂಬವನ್ನು ನಿದ್ದೆ ಗೆಡಿಸಿದೆ‌.

ಹುಟ್ಟು ಅಂಗವಿಕಲ ಸಹೋದರರಲ್ಲಿ ಅಣ್ಣ ತೀರಿ ಹೋಗಿದ್ದು ತಮ್ಮ ತಂದೆ ಪೌರ ಕಾರ್ಮಿಕನಾಗಿದ್ದ ಎಂಬ ಕಾರಣಕ್ಕೆ ವಿಧವೆ ತಾಯಿಗೆ 6 ಸಾವಿರ ಪೆನ್ಷನ್ ಬರ್ತಿದೆ, ನಾಳೆ ತಾಯಿಯೂ ಕೈ ಬಿಟ್ರೇ. ಈ ಅಂಗವಿಕಲ ಶಿರಾಜ್ ಅಹಮ್ಮದಖಾನ್ ತನಗೆ ಬರುವ 1500 ರೂಪಾಯಿ ಅಂಗವಿಕಲ ವೇತನದಲ್ಲಿ ಬದುಕು ಸಾಗಿಸೋದು, ಕುಟುಂಬ ನಡೆಸೋದು ಸವಾಲಾಗಿ ಈ ಲಾಕ್ ಡೌನ್,ನಲ್ಲಿ ಹೊಟ್ಟೆಗಾದ್ರೇ ಬಟ್ಟೆಗಿಲ್ಲದೆ ಬಟ್ಟೆಗಾದ್ರೇ ಹೊಟ್ಟೆಗಿಲ್ಲದ ಜೀವನ ಸಾಗಿಸಿ ಸೋತು ಸಹಾಯಕ್ಕೆ ಅಂಗಲಾಚಿದ್ದಾರೆ.

ಇನ್ನೂ ವಯಸ್ಸಿಗೆ ಬಂದ ಮಕ್ಕಳನ್ನು ಶಿಕ್ಷಣದ ಹೊರೆ ಜೊತೆ ದುಡಿಮೆ ಇರದೆ ನಿತ್ಯ ಕಣ್ಣಿರಲ್ಲೇ ಕೈ ತೊಳೆಯುತ್ತಾ ಹಾಸಿಗೆ ಹಿಡಿದ ಅತ್ತೆ, ಮೈದುನನ ಸೇವೆ ಮಾಡುತ್ತಿರುವ ಸೊಸೆ ಸಲ್ಮಾ ಬೇಗಂಗೆ ಎರೆಡು ಹೆಣ್ಣು ಒಂದು ಗಂಡು ಮಗುವಿನ ಭವಿಷ್ಯದ ಚಿಂತೆ ಕಾಡ್ತಾ ಇದ್ದು ಯಾರನ್ನು ಕೇಳುವುದು ? ಏನು ಮಾಡುವುದು ? ಎಂದು ದಿಕ್ಕೆ ತೋಚದೆ ಮನಸ್ಸಲ್ಲೇ ಕೊರಗುತ್ತಿದ್ದಾಳೆ.

ಎಲ್ಲವೂ ಚೆನ್ನಾಗಿದ್ದಾಗಲೇ ಕಷ್ಟದಲ್ಲಿದ್ದ ಇವರ ಬದುಕು ಲಾಕ್ ಡೌನ್ ಅವಧಿಯಲ್ಲಿಂತೂ ಎಲ್ಲಿಲ್ಲದ ಸಂಕಷ್ಟ ಅನುಭವಿಸುತ್ತಿದ್ದೂ ನಮಗೆ ಸಹಾಯ ಮಾಡಿ ಎನ್ನುತ್ತಿದ್ದಾರೆ ಸಹಾಯ ಮಾಡುವ ಸಹೃದಯಿಗಳು 9620116068 ಮೊಬೈಲ್ ಸಂಖ್ಯೆಗೆ ಸಂಪರ್ಕ ಮಾಡಿ ಕೈಲಾದ ಸಹಾಯ ನೀಡಿ‌.

Kshetra Samachara

Kshetra Samachara

14 days ago

Cinque Terre

126.61 K

Cinque Terre

8

 • ashfak bagewadi
  ashfak bagewadi

  sir ivar acont no.hakidre yallarigu anukul agotte.yaro duddu kodbekadre direct acountge huguette. please.

 • satish kumar
  satish kumar

  Ali Bhai, Bare suddhi prasara adhre saaladhu! Intha badathandalli irorge sahaya maadothara aagbeku..... idu nanna public next kalakaliya vinanthi....

 • PN Reporter - Shridhar Pujar
  PN Reporter - Shridhar Pujar

  Raghvendra Belur, 8050457426 call this mobile number sir

 • Raghvendra Belur
  Raghvendra Belur

  plz account nbr

 • Hasham Ranebennur
  Hasham Ranebennur

  namm rajyadalli ithara family bahal ive i request to government and rich people please help him

 • Ali Bhai
  Ali Bhai

  ಇಂತ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಪಬ್ಲಿಕ್ next ಗೆ ಧನ್ಯವಾದಗಳು. ಇಂತ ಸುದ್ದಿಗಳು ಮತ್ತಷ್ಟು ಪ್ರಸಾರವಾಗಲಿ. 🙏🏾🙏🏾🙏🏾🙏🏾🌹🌹🌹

 • Narayan v joshi
  Narayan v joshi

  if anybudy can help them plz help the poor family

 • Saddam Sayed
  Saddam Sayed

  😭😭😭😭