ಹುಬ್ಬಳ್ಳಿ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು! ಕಿರಣ್ ಸಾಧನೆ ನೋಡಿದವರು ಬೆರಗು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಮನುಷ್ಯ ಅಂದ ಮೇಲೆ ಎನಾದರೂ ಒಂದು ಟ್ಯಾಲೆಂಟ್‌ ಇರುತ್ತೆ ಅನ್ನೊದು ಹಿರಿಯರ ಮಾತು, ಅದರಂತೆ ತನ್ನ ಅಂಗವೀಕಲತೆಯನ್ನು ಆದಾರವಾಗಿಟ್ಟಕೊಂಡು, ಯುವಕನೊಬ್ಬ ತನ್ನ ವಿಶೇಷ ಕಲೆಯಿಂದ ಹಲವಾರು ಪ್ರಶಸ್ತಿ ಬಾಚಿಕೊಂಡು, ಎಲ್ಲರನ್ನು ಹುಬ್ಬೆರುವಂತೆ ಮಾಡಿದ್ದಾನೆ. ಅಷ್ಟಕ್ಕೂ ಆತ ಯಾರು ಅಂತಿರಾ ತೋರಿಸ್ತೆವಿ ನೋಡಿ...

ಹೌದು,,, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಗೆ ಅನುಗುಣವಾಗಿ, ಇಲ್ಲೊಬ್ಬ ಯುವಕ ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಸಾಧನೆ ಮಾಡುತ್ತಿದ್ದಾನೆ. ಹೀಗೆ ಮುಗುಳು ನಗೆ ಬೀರುತ್ತ ಮಾತನಾಡತ್ತಿರುವ ಈತನ ಹೆಸರು ಕಿರಣ್ ಶೇರಖಾನೆ. ಮೂಲತಃ ಹುಬ್ಬಳ್ಳಿ ಸಹಸ್ರಾರ್ಜುನ್ ಕಾಲೋನಿ ನಿವಾಸಿ. ಹುಟ್ಟುತ್ತಲೇ ಅಂಗವೀಕಲರಾಗಿರುವ ಈತನ ಸ್ಥಿತಿ ನೋಡಿ ಹೇಗಪ್ಪಾ ಸಾಕೊದು ಇವನನ್ನಾ, ದೊಡ್ಡವನಾದ‌ ಮೇಲೆ ಏನು ಮಾಡುತ್ತಾನೆ ಎಂಬ ಚಿಂತೆಯಲ್ಲಿದ್ದ ಕುಟುಂಬಸ್ಥರಿಗೆ, ದಿಗಿಲು ಬಡಿಯುವ ಹಾಗೆ ತನ್ನ ಚಿತ್ರಕಲೆ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾನೆ. ಇನ್ನು ಈತ ಮಾಡುವ ಡ್ರಾಯಿಂಗ್ ಆ್ಯಂಡ್‌ ಪೇಂಟಿಂಗ್ ಚಿತ್ರಕ್ಕೆ ಬಾರಿ ಬೇಡಿಕೆಯ ಜೊತೆಗೆ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ 2020 ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು , 49 ನೇ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನ ದೊರೆತಿದೆ. ಈತ ಪರಿಸರ ಸಂರಕ್ಷಣೆ ಗಿಡಮರ ರಕ್ಷಣೆ, ಗಿಡಮರಗಳನ್ನು ಕಡಿದು ಹಾಕಿದರೆ ಅದರಿಂದಾಗುವ ದುಷ್ಪರಿಣಾಮಗಳ ವಿಷಯವಾಗಿಟ್ಟುಕೊಂಡು ರಚನೆ ಮಾಡಿದ ಕಲಾಕೃತಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ...

ಅಂಗವಿಕಲರಾದ ಕಿರಣ ಅವರ ಕಲಾ ಪ್ರತಿಭೆಯ ಮೂಲಕ, ಸಾಧನೆ ಮಾಡಿ ತಮ್ಮ ಕಲಾಪ್ರತಿಭೆಯ ಮೂಲಕ ಜನಮನ ಪಡೆದುಕೊಂಡಿದ್ದಾರೆ. ಚಿತ್ರಕಲಾ ಪದವೀಧರರಾಗಿದ್ದಾರೆ. 8 ವರ್ಷಗಳಿಂದ ವಿಶಿಷ್ಟ ಶೈಲಿಯ ಚಿತ್ರಕಲಾಕೃತಿಗಳ ಮೂಲಕ ಗಮನ ಸೆಳೆದಿರುವ ಈತ, ಆರಂಭದಲ್ಲಿ ಜಲವರ್ಣದಲ್ಲಿ ಲ್ಯಾಂಡ್ ಸ್ಕೇಪ್, ಶೈಲಿಯ ಚಿತ್ರಕಲಾಕೃತಿಯಿಂದ ಎಲ್ಲರ ಮನ ಗೆದಿದ್ದಾರೆ. ಇನ್ನು ಈತನ ಕಲೆ ಮೆಚ್ಚಿದ ಗಣ್ಯರು, ಚಿನ್ನರ ಚೇತನ , ಜಿಲ್ಲಾಡಳಿತದ ಗಣರಾಜ್ಯೋತ್ಸವ ಪ್ರಶಸ್ತಿ ಮೈಸೂರಿನ ಪಿ.ಆರ್. ತಿಪ್ಪೇಸ್ವಾಮಿ ಕಲಾ ಪ್ರದರ್ಶನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇವರ ಈ ಸಾಧನೆಗೆ ಮನೆಯ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ‌‌‌‌....

ಒಟ್ಟಿನಲ್ಲಿ ಏನೆನೋ ಕಾರಣ ಹೇಳಿ, ಕೆಲಸ ಮಾಡದೆ ನುಣುಚಿಕೊಳ್ಳುವ ಈಗಿನ ಯುವಕರ ನಡುವೆ, ತನ್ನ ಅಂಗವೀಲಕತೆಯನ್ನು ಮೆಟ್ಡಿ ನಿಂತು ಎಲ್ಲಾ ಯುವಕರಿಗೆ ಮಾದರಿಯಾಗಿರುವ ಕಿರಣ್ ಸಾಧನೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂಬುದೆ ಎಲ್ಲರ ಆಶಯ......!

Kshetra Samachara

Kshetra Samachara

10 days ago

Cinque Terre

36.42 K

Cinque Terre

4

 • Mehboobali J Banglewale
  Mehboobali J Banglewale

  ತಾವು ಕಲೆಯ ಬಗ್ಗೆ ಕಾಳಜಿ ವಹಿಸಿ ಈ "ಬಿಗ್ ಮಾಸ್ಟರ್" ಕಿರಣ್ ಕುರಿತು ಮಾಹಿತಿ ನೀಡಿದ್ದಕ್ಕೆ ಹಿರಿಯ ಕಲಾವಿದನಾಗಿ ತಮಗೆ ಧನ್ಯವಾದಗಳನ್ನು ತಿಳಿಸಲು ಬಯಸುವೆ.. 💐

 • Sukesh Shetty
  Sukesh Shetty

  super Boy 💙

 • Bhosale
  Bhosale

  ನಮ್ಮ ಹುಬ್ಬಳ್ಳಿಯಲ್ಲಿ ಹಿಂತ ಕಲೆಗಾರರು ಇದ್ದಾರೆ ಎನ್ನುವುದೇ ಒಂದು ಹೆಮ್ಮೆ🙏🙏🙏 ತಮ್ಮ ಕಲೆ ಮುಗಿಲೆತ್ತರಕ್ಕೆ ಮುಟ್ಟಲಿ ಎಂಬುದೇ ನಮ್ಮೆಲ್ಲರ ಹಾರೈಕೆ all the best great Kiran bro

 • Mahantesh melinmani
  Mahantesh melinmani

  great