ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಧ್ವಜ ಕೊಳೆಯಾದರೂ ಕಣ್ಣು ಮುಚ್ಚಿ ಕುಳಿತ ಪಾಲಿಕೆ:ಹೊಸ ಧ್ವಜ ಹಾರಿಸಿದ ಆಟೋ ಚಾಲಕರು..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಹುಬ್ಬಳ್ಳಿಯ ಕಿರೀಟದಂತಿರುವ ಕಿತ್ತೂರಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ಧ್ವಜ ಕೊಳೆಯಾಗಿದ್ದರೂ ಕೂಡ ಬದಲು ಮಾಡದ ಪಾಲಿಕೆ ವಿರುದ್ಧ ಹುಬ್ಬಳ್ಳಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘಟನೆಯ ವತಿಯಿಂದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚೆನ್ನಮ್ಮ ವೃತ್ತದಲ್ಲಿರುವ ರಾಜ್ಯದ ಧ್ವಜ ಕೊಳೆಯಾಗಿದ್ದರೂ ಕೂಡ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯವಾಗಿದೆ. ರಾಜ್ಯದ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವಂತೆ ಮಾಡಿರುವ ಚೆನ್ನಮ್ಮ ವೃತ್ತದಲ್ಲಿ ಇಂತಹ ಅವ್ಯವಸ್ಥೆ ಗೋಚರಿಸುತ್ತಿದ್ದರೂ ಕೂಡ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಹೊಸ ಧ್ವಜವನ್ನು ಹಾರಿಸುವ‌ ಮೂಲಕ ಪಾಲಿಕೆ ಅಧಿಕಾರಗಳ ವಿರುದ್ಧ ಕಿಡಿ ಕಾರಿದರು.

Edited By : Manjunath H D
Kshetra Samachara

Kshetra Samachara

27/02/2021 03:04 pm

Cinque Terre

21.91 K

Cinque Terre

1

ಸಂಬಂಧಿತ ಸುದ್ದಿ