ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ - ಸಾಮಾಜಿಕ ಸೇವೆಗಾಗಿ ಸೌಂದರ್ಯ ಸ್ಪರ್ಧೆ ಆಯೋಜನೆ

ಹುಬ್ಬಳ್ಳಿ - ಇನರ್ ವ್ಹಿಲ್ ಕ್ಲಬ್ ಆಪ್ ಮಿಡ್ ಟೌನ್ ವತಿಯಿಂದ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುವ ಉದ್ದೇಸದಿಂದ ಮಹಿಳೆಯರಿಗಾಗಿ ಸೌಂದರ್ಯ ಸ್ಪರ್ಧೆಯನ್ನು ಮಾ.5 ರಿಂದ ಎರಡು ದಿನಗಳ ಕಾಲ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಶ್ರೀವಳ್ಳಿ ಹೆಬಸೂರು ಹೇಳಿದರು.

ಕಳೆದ ಎರಡು ವರ್ಷದಿಂದ ಈ‌ ಸ್ಪರ್ಧೆ ಆಯೋಜನೆ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸ್ಪರ್ಧೆಯಿಂದ ಸಂಗ್ರಹವಾಗುವ ಹಣವನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. 18-30 ರೊಳಗಿನ ಅವಿವಾಹಿತ, 25-40 ವಿವಾಹಿತ, 41 ರಿಂದ ಮೇಲ್ಪಟ್ಟವರು ಹಾಗೂ ಇತರೆ ವಿವಾಹಿತರಿಗೆ ಪ್ರತ್ಯೇಕವಾಗಿ ‌ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಎಲ್ಲಾ ವಿಭಾಗಗಳಿಂದ ಹತ್ತು‌ ಜನರಿಗೆ ಪ್ರಶಸ್ತಿ ನೀಡಲಾಗುವದು.‌ ಈ ಬಾರಿ ನೂರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು...

Edited By : Manjunath H D
Kshetra Samachara

Kshetra Samachara

23/02/2021 06:25 pm

Cinque Terre

22.93 K

Cinque Terre

1

ಸಂಬಂಧಿತ ಸುದ್ದಿ