ಧಾರವಾಡ: ಧಾರವಾಡದ ಕೆಲಗೇರಿ ಗುಡ್ಡದಮಠ ಕಲ್ಯಾಣ ಮಂಟಪದ ಬಳಿಯ ಬೈಪಾಸ್ ರಸ್ತೆಗೆ ಸಂಬಂಧಿಸಿದ ಕಚೇರಿಗೆ ನುಗ್ಗಿ ಕೆಲ ಹೊತ್ತು ಆತಂಕ ಸೃಷ್ಟಿಸಿದ್ದ ಸುಮಾರು ಎಂಟು ಅಡಿಯ ಕೆರೆ ಹಾವನ್ನು ಮಂಜುನಾಥ ಭಜಂತ್ರಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ 3ರ ಹೊತ್ತಿಗೆ ಬೈಪಾಸ್ ಕಚೇರಿ ಬಳಿ ತನ್ನ ಪಾಡಿಗೆ ಹೊರಟಿದ್ದ ಈ ಹಾವು, ಜನರ ಗದ್ದಲಕ್ಕೆ ಕಚೇರಿಯ ಒಳಗೆ ಹೊಕ್ಕಿತ್ತು. ಕಚೇರಿಯ ಬಾಗಿಲು ಮುಚ್ಚಿದ್ದ ಕಾರಣ ಗೋಡೆ ಏರಿ ಟ್ಯೂಬಲೈಟ್ ಮೇಲೆ ಹೋಗಿ ಕುಳಿತುಕೊಂಡಿತ್ತು. ಅಲ್ಲಿಯೇ ಇದ್ದ ಕೆಲವರು ಹಾವು ಹೊಡೆಯಲು ಸಹ ಸಿದ್ಧರಾಗಿದ್ದರು. ಅಷ್ಟರಲ್ಲಿ ಬೈಪಾಸ್ ರಸ್ತೆಯ ಸಿಬ್ಬಂದಿ ಆಗಮಿಸಿ ಸ್ನೇಕ್ ಮಂಜುನಾಥ ಅವರನ್ನು ಕರೆಯಿಸಿ ಸುರಕ್ಷಿತವಾಗಿ ಅದನ್ನು ಕಾಡಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡಿದರು.
ಕೆಲವೊಬ್ಬರು ಆ ಹಾವಿಗೆ ಕಲ್ಲು-ಕಟ್ಟಿಗೆಯಿಂದ ಹಿಂಸಿಸುತ್ತಿದ್ದರು. ಕೆರೆ ಹಾವು ಕಚ್ಚುವುದಿಲ್ಲ. ಯಾವುದೇ ಕಾರಣಕ್ಕೆ ಭಯಪಡಬೇಡಿ. ಯಾವುದೇ ಹಾವು ಕಂಡು ಬಂದಾಗ ಏಕಾಏಕಿ ಅದನ್ನು ಹಿಂಸೆ ಮಾಡುವುದು ಅಥವಾ ಕೊಲ್ಲುವುದು ಬೇಡ. ಎಲ್ಲ ಹಾವುಗಳು ವಿಷಕಾರಿಯಲ್ಲ ಎಂದು ಮಂಜುನಾಥ ತಿಳಿ ಹೇಳಿದರು.
Kshetra Samachara
23/02/2021 06:04 pm