ಹುಬ್ಬಳ್ಳಿ: ಅದು ಮಹಾತ್ಮ ಗಾಂಧೀಜಿಯವರ ಕನಸಿನ ಉದ್ಯಮ. ಲಾಕ್ ಡೌನ್ ನಲ್ಲಿ ಮಾತ್ರವಲ್ಲದೆ ಯಾವುದೇ ಸಂದರ್ಭದಲ್ಲಿ ಕೂಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಉದ್ಯಮ.ಈಗ ಚೇತರಿಸಿಕೊಳ್ಳಲು ಹೊಸ ಮಾರ್ಗದತ್ತ ಮುನ್ನಡೆಯುತ್ತಿದೆ.ಅಷ್ಟಕ್ಕೂ ಯಾವುದು ಆ ಉದ್ಯಮ...?ಚೇತರಿಸಿಕೊಳ್ಳಲು ಮಾಡಿದ ನಿರ್ಧಾರ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಹೊಸ ಹೊಸ ಫ್ಯಾಷನ್ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದಂತೆ ಖಾದಿ ಬಟ್ಟೆಗಳು ಮಾತ್ರ ಮೂಲೆ ಸೇರಿದಂತಾಗಿದ್ದವು. ಅಲ್ಲದೇ ಖಾದಿ ಗ್ರಾಮೋದ್ಯೋಗ ಕೈಗಾರಿಕೆಗಳು ಹಾಗೂ ಕಾರ್ಮಿಕರು ಕೋರೊನಾ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಸಂಕಷ್ಟಕ್ಕೆ ಸಿಲುಕಿಕೊಂಡು ಜೀವನ ನಡೆಸುವಂತಾಗಿತ್ತು.
ಆದ್ರೇ ಈಗ ಖಾದಿ ಬಟ್ಟೆಗಳ ಮಾರಾಟಕ್ಕೆ ಹೊಸ ಪ್ರಯತ್ನ ಕೈಗೊಂಡಿದ್ದು,ಆನ್ ಲೈನ್ ಮಾರುಕಟ್ಟೆಯಲ್ಲಿ ಕೂಡ ನೀವು ಖಾದಿ ಬಟ್ಟೆಗಳನ್ನು ಪಡೆದುಕೊಳ್ಳಲು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಸ್ಥೆ ಚಿಂತನೆ ನಡೆಸಿದ್ದು,ಇನ್ನುಮುಂದೆ ನಿಮಗೆ ಇಷ್ಟವಾದ ಬೆಂಗೇರಿ ಖಾದಿ ಗ್ರಾಮೋದ್ಯೋಗ ರಾಷ್ಟ್ರೀಯ ಧ್ವಜಗಳನ್ನು ಹಾಗೂ ಖಾದಿ ಬಟ್ಟೆಗಳನ್ನು ಆನ್ ಲೈನ್ ಮಾರುಕಟ್ಟೆಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಈಗಾಗಲೇ ಆನ್ ಲೈನ್ ಮಾರುಕಟ್ಟೆಗಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಲಾಗುತ್ತಿದ್ದು,ಇನ್ನೂ ಆರು ತಿಂಗಳಲ್ಲಿ ಎಲ್ಲ ರೀತಿಯ ಕಾರ್ಯಾಚರಣೆ ಪೂರ್ಣಗೊಂಡು ಬೆಂಗೇರಿ ಖಾದಿ ಸಿದ್ಧ ಉಡುಪುಗಳು ಹಾಗೂ ರಾಷ್ಟ್ರೀಯ ಧ್ವಜಗಳು ಆನ್ ಲೈನ್ ಮೂಲಕ ದೊರೆಯಲಿವೆ. ಅಮೆಜಾನ್, ಪ್ಲಿಪ್ ಕಾರ್ಟ್ ನಂತಹ ಆನ್ ಲೈನ್ ಮಾರುಕಟ್ಟೆ ಜೊತೆಗೆ ಮಾತುಕತೆ ನಡೆಸಿ ಖಾದಿ ಬಟ್ಟೆಗಳಿಗೆ ಹೊಸ ಟಚ್ ನೀಡಿ ಗ್ರಾಹಕರಿಗೆ ಒದಗಿಸಲು ಬೆಂಗೇರಿ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ಧಾರ ಕೈಗೊಂಡಿದೆ.ಈಗಾಗಲೇ ಖಾದಿ ಗ್ರಾಮೋದ್ಯೋಗ ಕಾರ್ಮಿಕರು ಮಾರುಕಟ್ಟೆಯ ಸಮಸ್ಯೆಯಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು,ಆನ್ ಲೈನ್ ಮಾರುಕಟ್ಟೆ ಮೂಲಕ ಚೇತರಿಸಿಕೊಳ್ಳಲಿವೆ.
ಯುವ ಸಮುದಾಯವನ್ನು ಸೆಳೆಯಲು ಹಾಗೂ ಖಾದಿ ಗ್ರಾಮೋದ್ಯೋಗವನ್ನು ಉತ್ತೇಜಿಸಲು ಸರ್ಕಾರ ಕೂಡ ಬೆಂಬಲ ನೀಡುತ್ತಿದ್ದು,ಈಗ ಹೊಸ ಪ್ರಯೋಗದಿಂದ ಖಾದಿ ಗ್ರಾಮೋದ್ಯೋಗ ಅಭಿವೃದ್ಧಿಗೆ ಮಂಡಳಿ ಶ್ರಮಿಸುತ್ತಿದ್ದು,ಮಹಾತ್ಮ ಗಾಂಧೀಜಿಯವರ ಕನಸಿನ ಖಾದಿ ಗ್ರಾಮೋದ್ಯೋಗ ಚೇತರಿಸಿಕೊಳ್ಳಲಿ ಎಂಬುವುದು ನಮ್ಮ ಆಶಯ..
Kshetra Samachara
23/02/2021 05:35 pm