ಕುಂದಗೋಳ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಲ್ಲರಿಗೂ ಅನ್ವಯವಾಗಲಿ ಎಲ್ಲರೂ ಆ ಕೆಲಸವನ್ನು ಪಡೆದುಕೊಳ್ಳಲಿ ಎನ್ನುವ ದೃಷ್ಟಿಯಿಂದ ಇಂದು ಇಂಗಳಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಶಂಭು ಹಿರೇಮಠ ಕಲಾ ತಂಡದಿಂದ ನರೇಗಾ ಯೋಜನೆ ಕುರಿತು ಕೌಟುಂಬಿಕ ನಾಟಕ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಜಾಗೃತಿ ನೀಡಿ, ನರೇಗಾ ಯೋಜನೆಯಿಂದ ಸಿಗುವ ಲಾಭಗಳ ಕುರಿತು ಹಳ್ಳಿಗರಿಗೆ ಮನದಟ್ಟು ಮಾಡಲಾಯಿತು.ಇಂಗಳಗಿ ಗ್ರಾಮಸ್ಥರು ನರೇಗಾ ಯೋಜನೆಯ ಕುರಿತು ತಮ್ಮಲ್ಲಿದ್ದ ಪ್ರಶ್ನೆಗಳನ್ನು ಅಧಿಕಾರಿಗಳಿಗೆ ಕೇಳಿ ಉತ್ತರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಇಂಗಳಗಿ ಗ್ರಾಮ ಪಂಚಾಯಿತಿ ಪಿಡಿಒ ಶಿವಾನಂದ ಎಸ್ ಉಪ್ಪಾರ ಹಾಗೂ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರು ಸಾರ್ವಜನಿಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಗ್ರಾಮದ ಜನರು ಉಪಸ್ಥಿತರಿದ್ದರು.
Kshetra Samachara
23/02/2021 04:55 pm