ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಚಟಗೇರಿ ಡಾಲಿ ವಿರೋಚಿತ ಸಾವು:ವಿಡಿಯೋ ವೈರಲ್

ಹುಬ್ಬಳ್ಳಿ: ಟಗರಿನ ಕಾಳಗ ಅಂದರೆ ಉತ್ತರ ಕರ್ನಾಟಕ ಮಂದಿಗೆ ಹಬ್ಬ. ಟಗರಿನ‌ ಕಾಳಗ ವೀಕ್ಷಣೆಗೆ ಸಾವಿರಾರು ಜನರು ಸೇರುತ್ತಾರೆ. ಅದರಲ್ಲೂ ಅಂಚಟಗೇರಿ ಡಾಲಿ ಟಗರು ಕಾಳಗದಲ್ಲಿ ಭಾಗವಹಿಸಿದೆ ಅಂದರೆ ಜನರು ಹುಚ್ಚೇದ್ದು‌ ಕುಣಿದು ಡಾಲಿಗೆ ಸಪೋರ್ಟ್ ಮಾಡುತ್ತಿದ್ದರು. ಆದರೆ ಅಂತ ಹೆಸರಾಂತ ಡಾಲಿ ಹೋರಾಟದ ಕಣದಲ್ಲಿಯೇ ಕೊನೆ ಉಸಿರೆಳೆದಿದೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯ ಡಾಲಿ ಹೆಸರಿನ ಟಗರು ಸುಮಾರು 60 ಕಣದಲ್ಲಿ ವಿಜಯಸಾಲಿಯಾಗಿತ್ತು. ಎಲ್ಲೆ ಹೋದರು ವಿಜಯದ ಮಾಲೆ ಧರಿಸಿಯೇ ಆಗಮಿಸುತ್ತಿದ್ದ ಡಾಲಿ ಮುಂಡಗೋಡ ತಾಲೂಕಿನ ಬಸ್ಸಾಪೂರ ಭಾಷಾ ಟಗರಿನ ವಿರುದ್ಧ ಸೆಣಸಾಟದಲ್ಲಿ ಸಾವನಪ್ಪಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದಲ್ಲಿ ನಡೆದ ಕಾಳಗದಲ್ಲಿ ವೀರಾವೇಷದಿಂದ ಹೋರಾಟ ನಡೆಸಿದ ಡಾಲಿ ಕೊನೆಯ ಸುತ್ತಿನಲ್ಲಿ ಭಾಷಾನ ಟಗರಿನ ಹೊಡೆತಕ್ಕೆ ನೆಲಕ್ಕೆ ಬಿದಿದ್ದು ಮೇಲೆ ಎಳಲೇ ಇಲ್ಲ. ಕಾಳಗದ ಕಣದಲ್ಲಿಯೇ ಹೋರಾಟ ಮಾಡುತ್ತ ಕೊನೆ ಉಸಿರೆಳೆದಿದ್ದು, ಮಾಲೀಕರು ಹಾಗೂ ಡಾಲಿ ಅಭಿಮಾನಿಗಳಿಗೆ ದುಖವನ್ನುಂಟು ಮಾಡಿದೆ.

Edited By : Manjunath H D
Kshetra Samachara

Kshetra Samachara

23/02/2021 01:12 pm

Cinque Terre

55.36 K

Cinque Terre

13

ಸಂಬಂಧಿತ ಸುದ್ದಿ