ಧಾರವಾಡ : ಕಸ್ತೂರಿ ಫೌಂಡೇಶನ್ ನ ಕಲಾಧರೆ ಡಾನ್ಸ್ ಅಂಡ್ ಫಿಟ್ನೆಸ್ ನ ವಾರ್ಷಿಕೋತ್ಸವದ ಹಿನ್ನೆಲೆ ಭಾನುವಾರ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯುವ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಈ ವೇಳೆ ಕನ್ನಡ ಕೋಗಿಲೆ ಖ್ಯಾತಿಯ ಮಹಾನ್ಯ ಗುರುಪಾಟೀಲ್, ಯುವ ಸಮಾಜ ಸೇವಕರು ಸುನಿಲ್ ಎಚ್ ಜಂಗಣಿ, ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ್, ಸಾಹಿತಿಗಳು ಮತ್ತು ಭಜನಾ ಕಲಾವಿದ ಸದಾನಂದ ವಾಲಿಕಾರ್, ರಾಷ್ಟ್ರಮಟ್ಟದ ಕುಸ್ತಿ ಪಟು ನಾಗಪ್ರಸಾದ್ ಉಡಚಮ್ಮ ನವರ ಅವರಿಗೆ ಸನ್ಮಾನಿಸಲಾಯಿತು. ನಂತರ ಸರಿಗಮಪ ಖ್ಯಾತಿಯ ಮಹನ್ಯ ಗುರು ಪಾಟೀಲ್ ತನ್ನ ಸುಮಧುರವಾದ ಗಾಯನದ ಮೂಲಕ ಸೇರಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದರು.
Kshetra Samachara
21/02/2021 08:29 pm