ಹಾವೇರಿ: ಆತ ಸಣ್ಣದೊಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ. ತನ್ನ ಅಲ್ಪಸ್ವಲ್ಪ ಸಂಪಾದನೆಯಲ್ಲಿಯೇ ತನ್ನ ಜೀವನ ನಡೆಸುವುದರ ಜೊತೆಗೆ ಇತರ ಪ್ರಾಣಿಗಳಿಗೂ ಆಹಾರ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತೀರಾ ಈ ಸ್ಟೋರಿ ನೋಡಿ..
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ಮಾಂತೇಶ ಡೊಳ್ಳಿನ ಎಂಬುವ ವ್ಯಕ್ತಿ ಯಲವಿಗಿ ಬಸ್ ನಿಲ್ದಾಣದ ಹತ್ತಿರ ಡಬ್ಬಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ.ತನ್ನ ಅಲ್ಪ ಸ್ವಲ್ಪ ಸಂಪಾದನೆಯಲ್ಲಿಯೇ ಪ್ರಾಣಿಗಳಿಗೆ ಹಣ್ಣು ಹಂಪಲು ಹಾಕುತ್ತಾನೆ.
ಹಣ್ಣು ಕೊಡುವುದು ಸಾಮಾನ್ಯವಾದರೂ ಈ ವ್ಯಕ್ತಿ ಮಕ್ಕಳಿಗೆ ತಿನ್ನಿಸುವಂತೆ ಅಂಗಡಿಗೆ ಬರುವ ಮಂಗಗಳಿಗೆ ತನ್ನ ಕೈಯಾರೆ ಬಾಳೆ ಹಣ್ಣು,ಬಿಸ್ಕಿಟ್ ತಿನಿಸುವ ಮೂಲಕ ಒಡನಾಟ ಬೆಳೆಸಿಕೊಂಡಿದ್ದಾನೆ. ಕೆಲಸದ ಒತ್ತಡದಲ್ಲಿ ಮನೆಯಲ್ಲಿರು ಮಕ್ಕಳಿಗೆ ಊಟ ಮಾಡಿಸಲು ಸಾಧ್ಯವಾಗದ ಈ ದಿನಮಾನಗಳಲ್ಲಿ ಈ ವ್ಯಕ್ತಿ ದಿನ ನಿತ್ಯದ ಕೆಲಸದ ಒತ್ತಡದ ಮಧ್ಯೆಯೂ ಪ್ರಾಣಿಗಳಿಗೆ ಕೈ ತುತ್ತು ಹಾಕುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಂಡಿದ್ದಾನೆ.
ದಿನಕ್ಕೆ ನೂರು ಇನ್ನೂರು ದುಡಿಯುವ ಮಾಂತೇಶ ಡೊಳ್ಳಿನ ಅವರು ತಮ್ಮ ಅಲ್ಪ ದುಡಿಮೆಯಲ್ಲಿಯೇ ಮೂಕ ಪ್ರಾಣಿಗಳಿಗೆ ಆಹಾರ ಹಾಕುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನೂ ಆಹಾರಕ್ಕಾಗಿ ಮಾಂತೇಶ ಡೊಳ್ಳಿನ ಅವರ ಅಂಗಡಿಯನ್ನು ಹುಡುಕಿಕೊಂಡು ಬರುವ ಮಂಗಗಳಿಗೆ ಮಾಂತೇಶ ಅತಿಥಿ ಸತ್ಕಾರ ಮಾಡುವುದು ನಿಜಕ್ಕೂ ವಿಶೇಷವಾಗಿದೆ.ಈ ಒಂದು ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್ ಗೆ ನೀಡಿದ್ಧಾರೆ.
Kshetra Samachara
20/02/2021 10:59 am