ಕುಂದಗೋಳ : ಈ ಸರ್ಕಾರಿ ಇಲಾಖೆಗೆ ಹೊಸ ಶರ್ತು ಹಳೇ ಶರ್ತಗಾಗಿ ಅರ್ಜಿ ಸಲ್ಲಿಸಿದ ರೈತನೊಬ್ಬ ಸತತ ಒಂಬತ್ತು ತಿಂಗಳು ಇಲಾಖೆಗೆ ಅಲೆದು ಸುಸ್ತಾಗಿ ಕೊನೆಗೆ ಅಧಿಕಾರಿಗಳು ಹೇಳಿದ ಮಾತು ಕೇಳಿ ಶಾಕ್ ಆಗಿದ್ದಾನೆ. ಇದೇನಪ್ಪಾ ! ಅಂತಹದು ಏನಾಯ್ತು ಅಂದ್ರಾ ?
ಇಲ್ನೋಡಿ ಸ್ವಾಮಿ ಹೀಗೆ ಕಾಗದ ಪತ್ರಗಳನ್ನು ಕೈಯಲ್ಲಿ ಹಿಡಿದು ತಹಶೀಲ್ದಾರ ಕಚೇರಿಯಲ್ಲಿ ಓಡಾಡ್ತಿರೋ ಇವ್ರು ಚಾಕಲಬ್ಬಿ ಗ್ರಾಮದ ರೈತರು.
ಬರದ್ವಾಡ ಗ್ರಾಮದ ಹದ್ದಿನಲ್ಲಿ 87/4 ಖಾತೆಯ 2 ಎಕರೆ 22 ಗುಂಟೆ ಜಮೀನಿನ ಭೂಮಿಯ ಉತಾರ ಸರಿಪಡಿಸಲು, ಅಂದ್ರೆ ಹೊಸ ಶರ್ತನ್ನು ಹಳೇ ಶರ್ತಾಗಿ ಪರಿವರ್ತಿಸಲು ತಹಶೀಲ್ದಾರ ಸಾಹೇಬ್ರಿಗೆ ಕಳೆದ ವರ್ಷ 2020 ಮೇ ತಿಂಗಳಲ್ಲೇ ಅರ್ಜಿ ಸಲ್ಲಿಸಿದ್ದಾರೆ.
ಬಳಿಕ ಇಂದಿನವರೆಗೆ ಸತತ 9 ತಿಂಗಳ ಕಾಲ ಆ ಕೆಲಸದ ನಿಮಿತ್ತ ಕಚೇರಿಗೆ ಅಲೆದು ಸುಸ್ತಾಗಿ ಅರ್ಜಿ ವಿಲೇವಾರಿ ಯಾಕೆ ವಿಳಂಬ ಎಂದು ಅಧಿಕಾರಿಗಳನ್ನ ಪ್ರಶ್ನಿಸಿದ್ರೆ ?
ಈ ಇಲಾಖೆ ಅಧಿಕಾರಿಗಳು ನೀವು ಕೊಟ್ಟ ಅರ್ಜಿ ಕಳೆದು ಹೋಗಿದೆ, ಮತ್ತೋಮ್ಮೆ ಅರ್ಜಿ ಕೊಡಿ ಎಂದಿದ್ದಾರೆ.
ಈ ಉತ್ತರಕ್ಕೆ ಶಾಕ್ ಆದ ರೈತ ಮತ್ತೆ ಪುನ: ಅರ್ಜಿ ಸಲ್ಲಿಸಲು ಹಳೆಯ ಎಲ್ಲ ಉತಾರ ತೆಗೆಸಬೇಕು ಕಾಗದದ ಖರ್ಚೇ ಎರೆಡು ಸಾವಿರಕ್ಕೂ ಅಧಿಕ ಅದರಲ್ಲಿ ಈಗಾಗಲೇ ನಮ್ಮ ಕೆಲಸ ಸಮಯ ಎರೆಡು ವಿನಾಕಾರಣ ಒಂಬತ್ತು ತಿಂಗಳು ಕಳೆದು ಹೊಯ್ತು ಎಂದು ಬೇಸರ ವ್ಯಕ್ತಪಡಿಸಿ ಮಾಧ್ಯಮದ ಮುಂದೆ ತಮ್ಮ ಅಳಲನ್ನ ತೋಡಿಕೊಂಡ್ರು.
ತಮ್ಮ ಜಮೀನಿನ ಕೆಲಸಕ್ಕಾಗಿ ರೈತರು ಸಲ್ಲಿಸಿದ ಅರ್ಜಿ ತಹಶೀಲ್ದಾರ ಕಚೇಲಿಯಲ್ಲೇ ಹೀಗೆ ಕಳೆದು ಹೋದ್ರೆ ರೈತರು ಎನ್ಮಾಡಬೇಕು ? ಅಲ್ವೇ.
ಈ ಬಗ್ಗೆ ಅಧಿಕಾರಿಗಳೇ ಸೂಕ್ತ ಕ್ರಮ ಕೈಗೊಂಡು ನಿಮ್ಮಿಂದಾದ ತಪ್ಪಿಗೆ ನೀವೆ ರೈತನ ಇಲಾಖೆ ಕೆಲಸ ಬಗೆಹರಿಸಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
18/02/2021 08:02 pm