ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಹತ್ತರ ಪೋರಿಯಿಂದ 'ಗಿನ್ನಿಸ್ ದಾಖಲೆ'

ಹುಬ್ಬಳ್ಳಿ: ಹತ್ತು ವರ್ಷದ ಪೋರಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್', 'ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ, ಅಮೇಜಿಂಗ್ ವರ್ಲ್ಡ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಂತಹ ಸಾಧನೆಗೈದು ಮತ್ತೊಂದು ವಿಶ್ವದಾಖಲೆಯ ಗರಿಯನ್ನು ಏರಿದ್ದಾಳೆ.

ಹೀಗೆ ಸ್ಕೇಟಿಂಗ್ ಮಾಡುತ್ತಿರುವ ಈ ಪುಟ್ಟ ಬಾಲಕಿಯ ಹೆಸರು ಸ್ತುತಿ ಕಿಶೋರ ಕುಲಕರ್ಣಿ. ಹುಬ್ಬಳ್ಳಿಯ ಶಿರೂರ ಪಾರ್ಕ್ ನಿವಾಸಿಯಾದ ಕಿಶೋರ ಮತ್ತು ರಶ್ಮಿ ದಂಪತಿಯ ಪುತ್ರಿ. ಸ್ತುತಿ 2021ರ ಜನವರಿ 8ರಂದು ಇನ್ ಲೈನ್ ಸ್ಕೇಟಿಂಗ್ ಮಾಡುತ್ತಾ ಮೂರು ಹುಲಾಹೂಪ್ ಗಳನ್ನು ತಿರುಗಿಸುವುದರೊಂದಿಗೆ 100 ಮೀಟರ್‌ ದೂರವನ್ನು ಕೇವಲ 23.45 ಸೆಕೆಂಡ್‌ಗಳಲ್ಲಿ ಕ್ರಮಿಸುವುದರ ಮೂಲಕ ಗಿನ್ನಿಸ್ ದಾಖಲೆ ಮಾಡಿ ಪೋಷಕರಿಗೆ ಮತ್ತು ವಾಣಿಜ್ಯ ನಗರಿಗೆ ಹೆಮ್ಮೆ ತಂದಿದ್ದಾಳೆ.

ಗಿನ್ನಿಸ್ ತಂಡ ಸೂಚಿಸಿದ ಮಾರ್ಗಸೂಚಿಯನ್ವಯ, ಜನವರಿ 8 ರಂದು ಶಿರೂರ ಪಾರ್ಕ್‌ನ ಮುಖ್ಯ ರಸ್ತೆಯಲ್ಲಿ ನಡೆದ ಈ ಪ್ರಯತ್ನದ ಚಿತ್ರೀಕರಣದ ಸಾಕ್ಷ್ಯಗಳನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಂಡಕ್ಕೆ ಸಲ್ಲಿಸಿದ್ದಾರೆ. ಅವರು ಎಲ್ಲ ತಾಂತ್ರಿಕ ಸಾಕ್ಷ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ದಾಖಲೆಯನ್ನು ಅನುಮೋದಿಸಿ ಪ್ರಮಾಣಿಸಿದ್ದಾರೆ. ಸ್ತುತಿ ತನಗೆ ದೊರೆತ 27 ಸೆಕೆಂಡ್‌ಗಳ ಗುರಿಯನ್ನು ಕೇವಲ 23.45 ಸೆಕೆಂಡ್‌ಗಳಲ್ಲಿ ಪೂರೈಸಿ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾಳೆ.

ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸ್ತುತಿ ಇಂತಹ ಮಹತ್ತರ ಸಾಧನೆ ಮಾಡಿದ್ದು, ಇನ್ನಷ್ಟೂ ಸಾಧನೆ ಮಾಡಲಿ ಎಂಬುದು ಹುಬ್ಬಳ್ಳಿ ಜನತೆಯ ಆಶಯ....

Edited By : Manjunath H D
Kshetra Samachara

Kshetra Samachara

08/02/2021 07:51 pm

Cinque Terre

32.25 K

Cinque Terre

0

ಸಂಬಂಧಿತ ಸುದ್ದಿ