ಹುಬ್ಬಳ್ಳಿ: ಆತ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಬ್ಬಂದಿ.ಪೊಲೀಸ್ ನೌಕರಿ ಮಾಡುವುದೇ ಕಷ್ಟದ ಕೆಲಸ. ಅಂತಹದ್ದರಲ್ಲಿ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದು,ಸುಮಾರು 23 ವರ್ಷಗಳ ಕೃಷಿ ಈಗ ದೇಶವೇ ತನ್ನತ್ತ ನೋಡುವಂತೆ ಮಾಡಿದ್ದಾರೆ.ಅಷ್ಟಕ್ಕೂ ಯಾರು ಪೊಲೀಸಪ್ಪ..ಆತ ಮಾಡಿದ್ದಾದರೂ ಏನು ಅಂತೀರಾ ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್...
ಗಡಿನಾಡು ಎಂದೇ ಖ್ಯಾತಿ ಪಡೆದ ಬೀದರ ಜಿಲ್ಲೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ
ಸಾಹಿತಿ ಹನುಮಂತ ವಲ್ಲೇಪುರೆ ಅವರು ಸುಮಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ವಲ್ಲೇಪುರ ಸುಮಾರು 23 ವರ್ಷ ಕಾಲ ವೃತ್ತಿಯ ಜೊತೆಗೆ ಶ್ರೀ ದತ್ತ ಭಾಗವತ' ಮಹಾಕೃತಿಯನ್ನು ರಚಿಸಿದ್ದು,ಇಂದು ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಹುಬ್ಬಳ್ಳಿಯಲ್ಲಿಂದು ಲೋಕಾರ್ಪಣೆಗೊಳಿಸಿದರು. ಭಗವಾನ್ ಶ್ರೀ ದತ್ತಾತ್ರೇಯ ಪುರಾಣವನ್ನು ಈ ಕೃತಿ ಹೊಂದಿದ್ದು, ಸುಮಾರು 2 ಲಕ್ಷ ಕೃತಿ ಮುದ್ರಿಸುವ ಸಂಕಲ್ಪವನ್ನು ಸಂಕೇಶ್ವರ ದಂಪತಿಗಳು ಹೊಂದಿದ್ದಾರೆ.ಕೆಲಸದ ಜವಾಬ್ದಾರಿಯ ನಡುವಿನಲ್ಲಿಯೇ ಸುಮಾರು 23 ವರ್ಷಗಳ ಸಾಹಿತ್ಯದ ಕೃಷಿಗೆ ಈಗ ಸಾಮಾಜಿಕ ಸೇವೆಗೆ ಲೋಕಾರ್ಪಣೆಗೊಂಡಿದೆ.
ಇನ್ನೂ ಪೊಲೀಸ್ ಇಲಾಖೆಯ ಬಿಡುವಿಲ್ಲದ ಕೆಲಸದ ಮಧ್ಯೆ ಹನುಮಂತ ವಲ್ಲೇಪುರೆ ಅವರು ಸಾಹಿತ್ಯ ಕೃಷಿ ಮಾಡಿದ್ದು, ಹಿಂದು ಸಂಪ್ರದಾಯದಲ್ಲಿ ಶ್ರೀ ದತ್ತ ದೇವರಿಗೆ ಇರುವ ಮಹತ್ವವನ್ನು ದತ್ತ ಭಾಗವತದಲ್ಲಿ ವಲ್ಲೇಪುರ ಅವರು ಬಿಂಬಿಸಿದ್ದಾರೆ.ಇನ್ನೂ ವಲ್ಲೇಪುರ ಅವರ ಸಾಹಿತ್ಯದ ಕೃಷಿಯನ್ನು ಕಂಡು ನಾಡೋಜ ದಿ.ಪಾಟೀಲ ಪುಟ್ಟಪ್ಪ ಅವರು ಹಂಸ ಕವಿ ಎಂದು ಬಿರುದು ನೀಡಿದ್ದು,ಈಗ ಹನುಮಂತ ವಲ್ಲೇಪುರ ಅವರು ಹಂಸಕವಿ ಎಂದೇ ಖ್ಯಾತಿ ಪಡೆದಿದ್ದಾರೆ. ಪೊಲೀಸ್ ಅಧಿಕಾರಿಯ ಸಾಹಿತ್ಯ ಕೃಷಿಯಿಂದ ದತ್ತರ ಚರಿತ್ರೆಯನ್ನು ಪ್ರತಿಯೊಬ್ಬರೂ ಅರಿಯಲು ಸಹಾಯವಾಗಲಿದೆ. ಭಗವಾನ್ ಶ್ರೀ ದತ್ತಾತ್ರೇಯ ಮಹಾಪುರಾಣವನ್ನು ಈ ಕೃತಿ ಹೊಂದಿದ್ದು, ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸ್ವಾಮಿ ಸಮರ್ಥ ಮಾಣಿಕ್ಯಪ್ರಭು, ಶಿರಡಿ ಸಾಯಿಬಾಬಾ, ಗಜಾನನ ಮಹಾರಾಜರು ಹೀಗೆ 36 ಅಂಶಿಕ ಅವತಾರಗಳನ್ನು ಶ್ರೀ ದತ್ತಾತ್ರೇಯರು ಹೊಂದಿದ್ದಾರೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರು ಸಹ ಶ್ರೀ ದತ್ತಾತ್ರೇಯರ ಅವತಾರಗಳಲ್ಲಿ ಒಬ್ಬರಾಗಿದ್ದು,ಈ ಕೃತಿ 168 ಅಧ್ಯಾಯ ಹೊಂದಿದೆ. 9 ಭಾಗಗಳಲ್ಲಿ ವಿಂಗಡಣೆ ಮಾಡಲಾಗಿದೆ. ಇದುವರೆಗೆ 125ಕ್ಕೂ ಹೆಚ್ಚು ಕೃತಿ ರಚಿಸಿದ್ದು, ಇದು ಲೋಕಾರ್ಪಣೆಗೊಳ್ಳುತ್ತಿರುವ 108ನೇ ಕೃತಿ ಆಗಿದೆ. ಜಗತ್ತಿನ 52 ಭಾಷೆಗಳಲ್ಲಿ ಈ ಕೃತಿ ಅನುವಾದಗೊಳಲಿದೆ. ಈಗಾಗಲೇ ಮರಾಠಿ, ತೆಲಗು, ಇಂಗ್ಲಿಷ, ನೇಪಾಳಿ, ಹಿಂದಿ, ಉರ್ದು, ತಮಿಳು, ಗುಜರಾತಿ ಭಾಷೆಗಳಲ್ಲಿ ಅನುವಾದಿಸುವ ಕಾರ್ಯ ನಡೆದಿದೆ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಇಂತಹ ಮಹತ್ವದ ಸಾಧನೆ ಮಾಡಿರುವ ಹನುಮಂತ ವಲ್ಲೇಪುರೆಯವರ ಸಾಹಿತ್ಯ ಕೃಷಿ ಮುಂದುವರೆಯಲಿ.ಶ್ರೀದತ್ತ ಭಾಗವತ್ ಕೃತಿಯು ಜಗತ್ತಿನಾದ್ಯಂತ ತನ್ನ ಕೀರ್ತಿಯನ್ನು ಬೆಳಗಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಹನುಮಂತ ವಲ್ಲೇಪುರೆ ಅವರಿಗೆ ಇನ್ನೂ ಹೆಚ್ಚಿನ ಗೌರವ ಸಿಗಲಿ ಎಂಬುವುದು ನಮ್ಮ ಆಶಯ...
Kshetra Samachara
08/02/2021 05:34 pm