ಕುಂದಗೋಳ : ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಸ್ವ ಗ್ರಾಮ ದೇವನೂರಿಗೆ ಆಗಮಿಸಿದ ಯೋಧ ಪರಮೇಶ್ವರ್ ಬೈರಪ್ಪನವರ ಹಾಗೂ ಮಲ್ಲಿಕಾರ್ಜುನ ಬಟ್ಟೂರು ಅವರನ್ನು ಶೃಂಗಾರಗೊಂಡ ತೆರದ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ದೇವನೂರು ಗ್ರಾಮದಲ್ಲಿ ಆಡಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಓದಿ ದೇಶ ಸೇವೆಗೆ ಬಡ್ತಿ ಪಡೆದು ಸತತ 17 ವರ್ಷಗಳ ವೃತ್ತಿ ಜೀವನವನ್ನು ಯಶಸ್ವಿಯಾಗಿ ಪೂರೈಸಿ ಗ್ರಾಮಕ್ಕೆ ಮರಳಿದ ಯೋಧರಿಗೆ ಅದ್ದೂರಿ ಸ್ವಾಗತ ಕೋರಲು ನಿರ್ಧರಿಸಿದ ಗ್ರಾಮಸ್ಥರು.
ಕೇಸರಿ ಬಿಳಿ ಹಸಿರು ಧ್ವಜ ವರ್ಣಗಳ ಅಲಂಕಾರದ ತೆರೆದ ವಾಹನದಲ್ಲಿ ವಾಧ್ಯ ಮೇಳ ಜೈಕಾರ ಘೋಷಣೆಗಳ ನಡುವೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ಹಬ್ಬದ ವಾತಾವರಣದಲ್ಲಿ ಯೋಧರನ್ನು ಸ್ವಾಗತಿಸಿದರು.
ಈ ಸಮಾರಂಭದ ಸಾನಿಧ್ಯ ವಹಿಸಿದ್ದ ಕಲ್ಯಾಣಪುರ ಬಸವಣ್ಣನವರ ದೇಶ ಸೇವೆಗೆ ಸಂದ ಗೌರವವನ್ನು ನೋಡಿ ಗ್ರಾಮಸ್ಥರು ಹಾಗೂ ಯೋಧರನ್ನು ಗುಣಗಾನ ಮಾಡಿ. ದೇಶ ಸೇವೆ ಸತ್ಕಾರ್ಯಕ್ಕೆ ಸಿಗುವ ಗೌರವ ಸನ್ಮಾನ ಶ್ರೇಷ್ಠವಾದುದು ಈ ಯೋಧರನ್ನು ಪಡೆದ ನಾವು ಪುಣ್ಯವಂತರು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಹಿರಿಯರು,, ಮಹಿಳೆಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
Kshetra Samachara
08/02/2021 02:00 pm