ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತಿಗೆ ಹುಬ್ಬಳ್ಳಿಯ ಪ್ರತಿಭೆಯೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದೆ. ಇನ್ನೂ ಕಾಲೇಜಿನಲ್ಲಿ ಓದುತ್ತಿರುವಾಗಲೇ ದೇಶಪಾಂಡೆ ಫೌಂಡೇಶನ್ ಬೆಂಬಲದೊಂದಿಗೆ ಯುವತಿಯೊಬ್ಬಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.ಹಾಗಿದ್ದರೇ ಯಾರು ಆ ಯುವತಿ...ಅವಳು ಮಾಡಿದ ಸಾಧನೆ ಏನು...ದೇಶಪಾಂಡೆ ಫೌಂಡೇಶನ್ ಬೆಂಬಲ ಆದ್ರೂ ಏನು ಅಂತೀರಾ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್...
ಹೀಗೆ ಕಂಪ್ಯೂಟರ್ ಮುಂದೆ ಕುಳಿತು ವರ್ಕ್ ಮಾಡುತ್ತಿರುವ ಯುವತಿಯ ಹೆಸರು ಹನಿಷಾ ಎಮ್. ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ E &E ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಹನಿಷಾ ಅವರು ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಅಂತರಾಷ್ಟ್ರೀಯ ಮಟ್ಟದ ಎಶಿಯನ್ ಹ್ಯಾಕತಾನ್-2021 ನಲ್ಲಿ ದ್ವೀತಿಯ ಬಹುಮಾನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ಸುಮಾರು 11 ದೇಶಗಳು ಭಾಗವಹಿಸಿದ ಈ ಹ್ಯಾಕತಾನ್-2021ರಲ್ಲಿ ದ್ವೀತಿಯ ಬಹುಮಾನ ಪಡೆದುಕೊಂಡು ಹುಬ್ಬಳ್ಳಿ ಮಾತ್ರವಲ್ಲದೆ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ.ಹಾಗಿದ್ದರೇ ಏಶಿಯನ್ ಹ್ಯಾಕತಾನ್ ನಲ್ಲಿ ಭಾಗವಹಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ ಅವರು ಏನು ಹೇಳ್ತಾರೇ ಕೇಳಿ...
ಇದೇ ಫೆಬ್ರವರಿ 01 ರಿಂದ ಫೆಬ್ರವರಿ 4 ವರೆಗೆ ಆನ್ ಲೈನ್ ಮೂಲಕ ನಡೆದ ಏಶಿಯನ್ ಹ್ಯಾಕತಾನ್ ನಲ್ಲಿ ಅಭಿಜ್ಞಾ ಶಾಸ್ತ್ರೀ ಟೀಮ್ ಲೀಡರ್ ನೇತೃತ್ವದಲ್ಲಿ ಭಾಗವಹಿಸಿದ ಹನಿಷಾ ಅವರು ದ್ವೀತಿಯ ಬಹುಮಾನ ಪಡೆದುಕೊಂಡಿರುವುದು ವಿಶೇಷವಾಗಿದೆ. ಸ್ಮಾರ್ಟ್ ಅಫ್ ನಲ್ಲಿ ಆಸಕ್ತಿ ಹೊಂದಿರುವ ಈ ಯುವತಿಗೆ ದೇಶಪಾಂಡೆ ಫೌಂಡೇಶನ್ ಸಾಕಷ್ಟು ಬೆಂಬಲ ನೀಡಿದ್ದು,ಈ ಸಾಧನೆಯ ಕುರಿತು ಹನಿಷಾ ಎಮ್. ಅವರು ದೇಶಪಾಂಡೆ ಫೌಂಡೇಶನ್ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಅಲ್ಲದೇ ದೇಶಪಾಂಡೆ ಫೌಂಡೇಶನ್ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಹ್ಯಾಕತಾನ್ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ಬ್ಯೂನಿ,ಮಯನ್ಮಾರ್, ಕಾಂಬೋಡಿಯ ಸೇರಿದಂತೆ ಹನ್ನೊಂದು ರಾಷ್ಟ್ರಗಳಿಂದ 330 ಜನರು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಹನಿಷಾ ಭಾರತ ತಂಡವನ್ನು ಪ್ರತಿನಿಧಿಸಿ ಸಾಧನೆ ಮಾಡಿದ್ದು,ಇದಕ್ಕೆ ದೇಶಪಾಂಡೆ ಫೌಂಡೇಶನ್ ಸಹ ಅಭಿನಂದನೆ ಸಲ್ಲಿಸಿದ್ದು,ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ ಪವಾರ ಅವರ ನೇತೃತ್ವದಲ್ಲಿ ಹನಿಷಾ ಅವರಿಗೆ ಸನ್ಮಾನಿಸಿ ಅಭಿನಂದನೆ ಕೂಡ ಸಲ್ಲಿಸಲಾಯಿತು.
ಕೃಷಿಕ ಕುಟುಂಬದಲ್ಲಿ ಹುಟ್ಟಿದ ಹನಿಷಾ ಮೂಲತಃ ಬಳ್ಳಾರಿಯವರಾಗಿದ್ದು,ಸುಮಾರು 4 ವರ್ಷಗಳ ಹಿಂದೇಯಷ್ಟೇ ಹುಬ್ಬಳ್ಳಿಗೆ ಆಗಮಿಸಿ ಹುಬ್ಬಳ್ಳಿ ಜನರ ಹುಬ್ಬೇರುವಂತೆ ಸಾಧನೆ ಮಾಡಿದ್ದಾರೆ. ಬ್ಯೂ ಎಕಾನಮಿ ಆ್ಯಂಡ್ ಎಜುಕೇಶನ್ ಎಂಬುವಂತ ಥೀಮ್ ಪ್ರಸ್ತುತ ಪಡಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ವಿಶೇಷವಾಗಿದೆ.ಇನ್ನೂ ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಆಪ್ ನಲ್ಲಿಯೇ ಮುಂದುವರೆಯಬೇಕು ಎಂಬುವಂತ ಮಹದಾಸೆಯನ್ನು ಹೊಂದಿರುವ ಹನಿಷಾ ಅವರ ಭವಿಷ್ಯ ಉಜ್ವಲವಾಗಿರಲಿ ಎಂಬುವುದು ನಮ್ಮ ಆಶಯ...
Kshetra Samachara
06/02/2021 08:42 pm