ಕುಂದಗೋಳ : ತಾಲೂಕಿನ ರೊಟ್ಟಿಗವಾಡ ಗ್ರಾಮದ ಹಾಲಪ್ಪ ಮರುಳಸಿದ್ದಪ್ಪ ಅಂಗಡಿ ಕುಟುಂಬದವರು ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮದ ಅಂಧ ಅನಾಥ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಂಗೀತ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಪುಟ್ಟರಾಜ ಗವಾಯಿಗಳ ಕರಸಂಜಾತರಾದ ಕಲ್ಲಯ್ಯಜ್ಜನವರಿಗೆ ದೇಣಿಗೆ ಹಣವನ್ನು ಸಮರ್ಪಿಸಿದರು.
ಹಣ ಸ್ವೀಕರಿಸಿ ಮಾತನಾಡಿ ಕಲ್ಲಯ್ಯಜ್ಜನವರು ಹಾಲಪ್ಪ ಅಂಗಡಿ ಕುಟುಂಬದವರು ನೀಡಿದ ಹಣವು ನೇರ ಆ ಭಗವಂತನಿಗೆ ಸಲ್ಲುತ್ತದೆ. ಅಂಧ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಅವರ ಕೊಡುಗೆ ನಿರಂತರವಾಗಿರಲಿ ಗದುಗಿನ ಪಂಚಾಕ್ಷರಿ ಅವರಿಗೆ ಆಯುಷ್ಯ ಆರೋಗ್ಯ ನೀಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಅಂಗಡಿ ಕುಟುಂಬಸ್ಥರು ಕಲ್ಲಯ್ಯಜ್ಜನವರಿಗೆ ಪಾದಪೂಜೆ ನೆರವೇರಿಸಿ ಪ್ರಷಾದದ ವ್ಯವಸ್ಥೆ ಮಾಡಿದರು.
Kshetra Samachara
05/02/2021 11:35 am