ಹುಬ್ಬಳ್ಳಿ: ಮಹಿಳೆಯರಿಂದ ದೂರವಾಗಿದ್ದ ಈಜುಕೊಳ ಈಗ ಮಹಿಳಾ ಈಜುಗಾರರನ್ನು ಆಕರ್ಷಿಸುವ ಮೂಲಕ ಮತ್ತಷ್ಟು ಸ್ಮಾರ್ಟ್ ಆಗಿ ಹೊರ ಹೊಮ್ಮಲಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಹು-ಧಾ ಮಹಾನಗರ ಪಾಲಿಕೆ ಈಜುಕೊಳ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಸ್ಮಾರ್ಟ್ ಆಗುತ್ತಿದ್ದು,ಇಷ್ಟು ದಿನ ಮಹಿಳೆಯರಿಂದ ದೂರವಾಗಿದ್ದ ಈಜುಕೊಳ ಈಗ ಮಹಿಳಾ ಈಜುಗಾರರನ್ನು ಆಕರ್ಷಿಸಲು ಸನ್ನದ್ಧವಾಗಿದೆ.ಈ ಹಿಂದೆ ಕೂಡ ಮಹಿಳೆಯರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಿದರು ಕೂಡ ಮಹಿಳೆಯರು ಮಾತ್ರ ಇತ್ತ ಕಡೆ ಸುಳಿಯುತ್ತಿರಲಿಲ್ಲ.ಆದ್ದರಿಂದ ಪುರುಷರಿಗೆ ಮಾತ್ರ ಸೀಮಿತವಾಗಿತ್ತು.ಆದರೆ ಈ ಬಾರಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಹಿಳೆಯರಿಗಾಗಿ ಹಲವಾರು ರೀತಿಯ ಕ್ರಮಗಳನ್ನು ಕೈಗೆತ್ತಿಕೊಂಡು ಮಹಿಳೆಯರನ್ನು ಈಜುಕೊಳದತ್ತ ಆಕರ್ಷಿಸಲು ಚಿಂತನೆ ನಡೆಸಿದೆ.
ಈಗಾಗಲೇ ಎಲ್ಲ ರೀತಿಯ ಕಾಮಗಾರಿ ಚುರುಕುಗೊಂಡಿದ್ದು,15 ಮೀಟರ್ ಸನ್ ಶೆಡ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ.ಮಹಿಳೆಯರನ್ನು ಈಜುಕೊಳದತ್ತ ಕರೆ ತರುವ ನಿಟ್ಟಿನಲ್ಲಿ ಸನ್ ಶೆಡ್ ನಿರ್ಮಾಣ ಮಾಡಲಾಗುತ್ತಿದ್ದು,ಇನ್ನೂ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನದ ಗೃಹಗಳ ನಿರ್ಮಾಣ ಕಾರ್ಯಗಳು ಕೂಡ ಚುರುಕುಗೊಂಡಿದೆ.
Kshetra Samachara
04/02/2021 05:34 pm