ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಸೇವಾ ಟ್ರಸ್ಟ್. ಈ ಟ್ರಸ್ಟ್ ನಲ್ಲಿ ಹಲವಾರು ಜನಸೇವಕರು ಸೇರಿದಂತೆ ಸುಮಾರು ಕಲಾವಿದರು ತೊಡಗಿಕೊಂಡಿದ್ದಾರೆ.ಈ ಕಲಾವಿದರ ಸಮೂಹ ಈಗ ಸಾಮಾಜಿಕ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶ ನಿಜಕ್ಕೂ ಜನೋಪಯೋಗಿಯಾಗಿದೆ. ಹಾಗಿದ್ದರೇ ಯಾವುದು ಆ ಕಾರ್ಯ ಅಂತೀರಾ ತೋರಸ್ತೀವಿ ನೋಡಿ..
ಅವಳಿ ನಗರ ವೇಗವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಇಲ್ಲಿನ ತ್ಯಾಜ್ಯ ವಿಲೇವಾರಿ ಇನ್ನಷ್ಟು ಸವಾಲಾಗಲಿದೆ. ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಜಿ.ಎಸ್. ಟ್ರಸ್ಟ್ ನಿರ್ಮಿಸಿದ ‘ಎಲ್ಲರೂ ಒಂದಾಗಿ’ ವಿಡಿಯೊ ಆಲ್ಬಂ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು,‘ಮಹಾನಗರ ಪಾಲಿಕೆ ಮಾಡಬೇಕಿದ್ದ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ.ಹೌದು..ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪಾಲಿಕೆ ಸಾಕಷ್ಟು ಕ್ರಮ ಕೈಗೊಳ್ಳುತ್ತದೆ. ಇವೆಲ್ಲ ಪರಿಣಾಮಕಾರಿ ಆಗಬೇಕೆಂದರೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂಬುವುದನ್ನು ಈ ಆಲ್ಬಂ ಮೂಲಕ ಪ್ರಸ್ತುತ ಪಡಿಸಲಾಗಿದೆ.
ಆಲ್ಬಂನ್ನು ನಿರ್ದೇಶಕ ರವೀಂದ್ರ ರಾಮದುರ್ಗಕರ ನಿರ್ದೇಶನ ಮಾಡಿದ್ದು,ಸಾಹಿತ್ಯವನ್ನು ವೀರೇಶ ಹಂಡಿಗಿ ರಚಿಸಿದ್ದಾರೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿ ಸಾಕಷ್ಟು ಹೆಸರು ಮಾಡುತ್ತಿರುವ ಹು-ಧಾ ಮಹಾನಗರದಲ್ಲಿ ಸ್ವಚ್ಚತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಆಲ್ಬಂ ಸಿದ್ಧಪಡಿಸಲಾಗಿದೆ. ಎಲ್ಲೆಂದರಲ್ಲಿ ಉಗುಳುವುದು ಅವ್ಯವಸ್ಥೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನಕ್ಕೆ ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ಚಾಲನೇ ನೀಡಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯ ನಗರವನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಸಾರ್ವಜನಿಕರ ಸಹಭಾಗಿತ್ವ ಕೂಡ ಅನಿವಾರ್ಯತೆ ಇದೆ.ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಕಾರ್ಯಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂಬುವುದು ಆಲ್ಬಮ್ ನ ಸಂದೇಶವಾಗಿದೆ.
Kshetra Samachara
30/01/2021 01:04 pm