ಕುಂದಗೋಳ : ಬು.ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ವಿರುದ್ಧ ಗ್ರಾಮದ ಸಿದ್ದಪ್ಪ ಕಳಸಣ್ಣನವರ ಕೈಗೊಂಡ ಹದಿನೈದು ದಿನಗಳ ನಿರಂತರ ಸತ್ಯಾಗ್ರಹಕ್ಕೆ ಗುರುವಾರ ಜಯ ಸಿಕ್ಕಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಬಿ.ಸುಶೀಲಾ ಹೋರಾಟಗಾರರ ಸಮಸ್ಯೆ ಆಲಿಸಿ ಪಂಚಾಯಿತಿಯಲ್ಲಿ ಅವ್ಯವಹಾರ ಎಸಗಿದ ತಪ್ಪಿತಸ್ದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಮಯ ಕೋರಿ ಹೋರಾಟ ಹಿಂಪಡೆಯಲು ಗ್ರಾಮದ ಜನರಲ್ಲಿ ಮನವಿ ಮಾಡಿದರು.
ಸಿದ್ದಪ್ಪ ಕಳಸಣ್ಣನವರ ಜಿ.ಪಂ ಸಿಇಒ ಅವರಿಗೆ ಗ್ರಾಮ ಪಂಚಾಯಿತಿಯಲ್ಲಿ ಒಂದೂವರೆ ಕೋಟಿಗೂ ಅಧಿಕ ಹಣ ಅವ್ಯವಹಾರವಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆದೇಶಿಸಿ ಎಂದು ನೊಂದ ಮನಸ್ಸಿನ ಸತ್ಯಾಗ್ರಹದ ದಿನಗಳ ಮಾಹಿತಿ ಹಂಚಿಕೊಂಡರು.
ಒಟ್ಟಾರೆ ಸತತ ಹದಿನೈದು ದಿನ ನಡೆದ ಹೋರಾಟಕ್ಕೆ ಜಯ ಸಿಕ್ಕಿದ್ದು, ಜಿ.ಪಂ ಸಿಇಒ ಮುಂದಿನ ಹದಿನೈದು ದಿನಗಳ ಒಳಗಾಗಿ ಅವ್ಯವಹಾರದಲ್ಲಿ ಪಾಲುದಾರರಾದ ಎಲ್ಲರಿಗೂ ಶಿಕ್ಷೆ ಖಚಿತ ಎಂದಿದ್ದು, ಹೋರಾಟದ ರೂವಾರಿ ಸಿದ್ದಪ್ಪ ಕಳಸಣ್ಣನವರಿಗೆ ಸತ್ಯಾಗ್ರಹಕ್ಕೆ ಹಾಲು ನೀಡಿ ಉಪವಾಸ ಅಂತ್ಯ ಗೊಳಿಸಿದರು.
Kshetra Samachara
29/01/2021 10:52 am