ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾಳೆ ಈ ಹಳ್ಳಿ ಪ್ರತಿಭೆ

ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ

ಹುಬ್ಬಳ್ಳಿ- ಸಾಧನೆ ಮಾಡಲು ಹಳ್ಳಿಯಾದರೇನೂ, ದಿಲ್ಲಿ ಆದರೇನೂ, ಜೀವನದಲ್ಲಿ ಸಾಧಿಸಲು ಛಲ ಮತ್ತು ಆತ್ಮ ವಿಶ್ವಾಸದ ಜೊತೆಗೆ ಸತತ ಪ್ರಯತ್ನದಿಂದ ಮಾತ್ರ ಸಾಧ್ಯ. ಅಂತಹ ಹಾದಿಯಲ್ಲಿ ಬೆಳೆದು ಬಂದ ಪುಟ್ಟ ಹಳ್ಳಿಯ ಪ್ರತಿಭೆಯೊಂದು, ಯೋಗ ಮತ್ತು ಮಲ್ಲಕಂಬ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶ ಮತ್ತು ಆ ಹಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಹೀಗೆ ವಿಭಿನ್ನವಾಗಿ ಯೋಗ, ಮತ್ತು ಮಲ್ಲಕಂಬ ಮಾಡುತ್ತಿರುವ ಈ ಯುವತಿಯ ಹೆಸರು ಪೂಜಾ ತಳವಾರ. ಬಡತನ ಬದುಕು ಕಟ್ಟಿಕೊಡುತ್ತೆ ಎಂಬ ದೊಡ್ಡವರ ಮಾತಿನಂತೆ, ಬಡಕುಟುಂಬದಲ್ಲಿ ಜನಿಸಿದ ಪೂಜಾ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಯಲ್ಲವ್ವ ತಳವಾರ ಅವರ ಸುಪುತ್ರಿ. ತಾಯಿಗೆ ಕುಟುಂಬ ಸಲಹಲು ಕೂಲಿಯೆ ಆಧಾರವಾಗಿದ್ದು ಇಷ್ಟೆಲ್ಲ ಕಷ್ಟದಲ್ಲಿಯೂ ಮಗಳ ಸಾಧನೆಗೆ ದಾರಿ ದೀಪವಾಗಿದ್ದು, ತಮ್ಮ ಕುಟುಂಬಕ್ಕೆ ಸಂತಸ ತಂದಿದೆ.

ಪೂಜಾ ಶಿರಗುಪ್ಪಿ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಬ ತರಬೇತಿ ಕೇಂದ್ರದಲ್ಲಿ ಕಲಿಯುತ್ತಿದ್ದು, ಅದರ ಜೊತೆಗೆ ಹುಬ್ಬಳ್ಳಿಯ ಮೂರುಸಾವಿರ ಮಠದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ದಿನಗಳಿಂದ ಭಾಗವಹಿಸಿದ ಸ್ಪರ್ಧೆಗಳಲ್ಲಿ ತಮ್ಮದೆ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾಳೆ. ಯೋಗದಲ್ಲಿ ಇಂಡೋ-ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಮಲ್ಲಕಂಭ ಫೆಡರೇಶನ್ ಇಂಡಿಯಾ ಆಯೋಜಿಸಿದ ಅಂತರಾಷ್ಟ್ರೀಯ ಮಲ್ಲಕಂಭ ಸ್ಪರ್ಧೆಯಲ್ಲಿ ಪ್ರಥಮ, ನ್ಯಾಷನಲ್ ಲೆವೆಲ್ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ, ಯೋಗ ಫೆಡರೇಶನ್ ಆಫ್ ಇಂಡಿಯಾ 44ನೇ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ, ಮತ್ತು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಹೀಗೆ ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಯೋಗಾಸನ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ ಕೀರ್ತಿ ಪೂಜಾ ತಳವಾರಗೆ ಸಲ್ಲುತ್ತದೆ.

ಜೀವನದಲ್ಲಿ ಏನೂ ಇಲ್ಲ ಎಂದು ಕೊರಗುತ್ತ ಕೂರುವ ಬದಲು, ಇರುವುದನ್ನೇಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕಿದರೆ ಅಂದುಕೊಂಡದ್ದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಲು ಸಾಧ್ಯ ಎನ್ನುವುದಕ್ಕೆ ಈ ಬಾಲಕಿಯೆ ಉದಾಹರಣೆ. ಪುಟ್ಟ ಪುಟ್ಟ ಹೆಜ್ಜೆಗಳು ಮುಂದಿನ ಸಾಧನೆಯ ಮೆಟ್ಟಿಲು ಎಂಬ ಮಾತಿನಂತೆ, ಮುಂದಿನ ಇವಳ ಅಗಾಧ ಕನಸು ನನಸಾಗಲಿ ಎನ್ನುವುದು ಎಲ್ಲರ ಆಶಯ..!

Edited By :
Kshetra Samachara

Kshetra Samachara

26/01/2021 10:50 am

Cinque Terre

51.55 K

Cinque Terre

16

ಸಂಬಂಧಿತ ಸುದ್ದಿ