ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊಸ ವರ್ಷದ ಆರಂಭದಲ್ಲಿಯೇ ಗ್ರಾಹಕರಿಗೆ ಬಿಗ್ ಶಾಕ್ ನೀಡಲಿದೆ ಹೆಸ್ಕಾಂ

ಹುಬ್ಬಳ್ಳಿ: ಒಂದು ಕಡೆ ಕೋವಿಡ್ 19 ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಗ್ಯಾಸ್ ಸಿಲಿಂಡರ್ ದರ, ಪೆಟ್ರೋಲ್ ಬೆಲೆ ಹೆಚ್ಚಳ ಜನರ ಜೇಬಿಗೆ ಕತ್ತರಿ ಹಾಕಿದೆ. ಈ ನಡುವೆ ಆ ಭಾಗದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೊಸ ವರ್ಷದ ಆರಂಭದಲ್ಲೆ ಆ ಇಲಾಖೆ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಯಾವುದು ಇಲಾಖೆ..? ಏನದು ಶಾಕ್ ಅಂತೀರಾ ಈ ವರದಿ ನೋಡಿ..

ಈಗಾಗಾಲೇ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಿಂದ ಜನರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಡಿಸೇಲ್ ಬೆಲೆ ದಿನೆ ದಿನೆ ಗಗನಕ್ಕೇರುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಈಗ ಹೆಸ್ಕಾಂ, ಗ್ರಾಹಕರಿಗೆ ಕರೆಂಟ್ ಶಾಕ್ ನೀಡಿದೆ.

ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ದರ ಹೆಚ್ಚಳವಾಗುತ್ತಿರವುದು ಗ್ರಾಹಕರಿಗೆ ಮತ್ತೊಂದ್ ಶಾಕ್ ನೀಡಿದಂತಾಗಿದೆ. ಎರಡು ತಿಂಗಳ ಹಿಂದಷ್ಟೆ ವಿದ್ಯುತ್ ದರ ಏರಿಸಿದ್ದ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮವು ಮತ್ತೆ ವಿದ್ಯುತ್ ದರ ಏರಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದೆ.

ನಿಗಮಕ್ಕೆ 2021-22 ರಲ್ಲಿ 112.37 ಕೋಟಿ ಆದಾಯದ ಕೊರತೆ ಆಗಲಿದ್ದು, ಇದನ್ನ ಸರಿದೂಗಿಸಲು ಪ್ರತಿ ಯೂನಿಟ್ ದರ ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಕೋವಿಡ್ 19 ನಿಂದ ಆರ್ಥಿಕ ಚಟುವಟಿಕೆ ಮಂದಗತಿಯಲ್ಲಿದ್ದು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇವುಗಳ ನಡುವೆ 2020 ರ ಮಾಚ್೯ ನಲ್ಲಿ ಹೆಚ್ಚಿಸಬೇಕಿದ್ದ ದರವನ್ನ ನವೆಂಬರ್ ನಲ್ಲಿ ಸಾರ್ವಜನಿಕರ ವಿರೋದದ ನಡುವೆಯೂ ದರ ಏರಿಸಿತ್ತು. ಈಗ ಮತ್ತೆ ದರ ಏರಿಕೆಗೆ ಮುಂದಾಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೆ ವಿದ್ಯುತ್ ದರ ಹೆಚ್ಚಳದಿಂದಾಗಿ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳ ಜತೆಗೆ ಸ್ಥಳೀಯ ಸಂಸ್ಥೆಗಳು ಬಿಲ್ ಪಾವತಿಸುವ ಕುಡಿಯುವ ನೀರು, ಬೀದಿ ದೀಪಗಳ ವಿದ್ಯುತ್ ಬಳಕೆ ದರಗಳಲ್ಲಿ ಭಾರಿ ಹೆಚ್ಚಳವಾಗಲಿದೆ. ಮಹಾನಗ ಪಾಲಿಕೆ ಹಾಗೂ ನಗರ ಪ್ರದೇಶಗಳಲ್ಲಿರುವ ಗೃಹ ಬಳಕೆದಾರರು ತಿಂಗಳಿಗೆ 50 ಯೂನಿಟ್ ಬಳಕೆ ಮಾಡುತ್ತಿದ್ದರೆ , ಈಗ 272.50 ಬಿಲ್ ಬರುತ್ತಿತ್ತು.

ಏರಿಕೆ ನಂತರ 309 ಆಗಲಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 257.50 ರಿಂದ 294 ಕ್ಕೆ ಏರಿಕೆಯಾಗಲಿದೆ. ನಗರದ ವಾಣಿಜ್ಯ ಬಳಕೆ ದಾರರಿಗೆ ತಿಂಗಳ 50 ಯೂನಿಟ್ ಗೆ 412.5 ರಿಂದ 449 ಕ್ಕೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 387.5 ರಿಂದ 424 ಕ್ಕೆ ಏರಿಕೆಯಾಗಲಿದೆ. ದರ ಹೆಚ್ಚಳ ಮಾಡುವಂತೆ ಹೆಸ್ಕಾಂ ನಿಂದ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕೆಇಆರ್ ಸಿನಿಂದ ಪ್ರಸ್ತಾವನೆಗೆ ಅನುಮೋದನೆಯೊಂದೆ ಬಾಕಿಯಿದ್ದು, ಶೀಘ್ರದಲ್ಲೇ ಪ್ರಸ್ತಾವನೆಗೆ ಅನುಮೋದನೆ ಸಿಗುವ ವಿಶ್ವಾಸದಲ್ಲಿದ್ದಾರೆ ಹೆಸ್ಕಾಂ ಅಧಿಕಾರಿಗಳು. ವಿದ್ಯುತ್ ದರದಲ್ಲಿ ಹೆಚ್ಚಳವಾಗುತ್ತಿರುವುದಕ್ಕೆ ಹೆಸ್ಕಾಂ ವ್ಯಾಪ್ತಿಗೆ ಬರುವ ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ, ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಯ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದು ವಾಣಿಜ್ಯೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ನಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಸಂದರ್ಭದಲ್ಲಿ ದರ ಏರಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಕ್ಷೇಪಣೆ ಸಲ್ಲಿಕೆಗೆ ಮುಂದಾಗಿದೆ.

ದಿನ ಬಳಕೆ ವಸ್ತುಗಳ ಬೆಲೆ ಪ್ರತಿನಿತ್ಯ ಗಗನಕ್ಕೇರುತ್ತಿರುವಾಗಲೆ, ವಿದ್ಯುತ್ ದರದಲ್ಲಿಯು ಎರಡೆ ತಿಂಗಳಲ್ಲಿ ಮತ್ತೆ ಹೆಚ್ಚಳವಾಗುತ್ತಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೊಸ ವರ್ಷದ ಆರಂಭದಲ್ಲೆ ಗ್ರಾಹಕರಿಗೆ ವಿದ್ಯತ್ ದರ ಹೆಚ್ಚಳಕ್ಕೆ ಮುಂದಾಗಿ ಹೆಸ್ಕಾಂ ಶಾಕ್ ನೀಡಿದ್ದು ಜನರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.

Edited By : Manjunath H D
Kshetra Samachara

Kshetra Samachara

13/01/2021 08:17 pm

Cinque Terre

55.75 K

Cinque Terre

20

ಸಂಬಂಧಿತ ಸುದ್ದಿ