ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉಪಯೋಗಕ್ಕಿಲ್ಲದ ಎಟಿಎಂ ಯಂತ್ರ ಹಣಕ್ಕಾಗಿ ಜನ ಪರದಾಟ

ಕುಂದಗೋಳ : ನಿತ್ಯ ಬೆಳಗಾದ್ರೆ ಸಾಕು ಜೀವನದ ಖರ್ಚು-ವೆಚ್ಚಗಳನ್ನ ನಿಭಾಯಿಸೋಕೆ ಹಣ ಬೇಕೆ ಬೇಕು. ಆ ಹಣ ಜೇಬಿನಲ್ಲಿದ್ರೇ ಓಕೆ ಬದಲಾಗಿ ಆ ಹಣ ಪಡೆಯೋಕೆ ನೀವು ಎಟಿಎಂ ಕಾರ್ಡ್ ಮೇಲೆ ಅವಲಂಬಿತರಾಗಿದ್ರೆ ಕುಂದಗೋಳದಲ್ಲಿ ಆ ಹಣ ನಿಮ್ಮ ಕೈಗೆ ಸಿಗೋದೆ ಡೌಟು ಬಿಡಿ.

ಇದೇನಪ್ಪಾ ! ನಮ್ಮ ಹಣ ನಮ್ಮ ಅಕೌಂಟ್ ಅಲ್ಲಿ ಇದ್ರೆ ಯಾಕೆ ಸಿಗಲ್ಲಾ ಅಂದ್ರಾ ? ಹೌದು ಸ್ವಾಮಿ ನಿಮ್ಮ ಎಟಿಎಂ ಕಾರ್ಡ್ನಲ್ಲಿ ಹಣವಿದ್ರೂ ಕುಂದಗೋಳ ಪಟ್ಟಣದಲ್ಲಿ ಆ ಹಣ ನಿಮ್ಮ ಕೈಗೆ ಸಿಗಲ್ಲ. ಕಾರಣ ಎಟಿಎಂ ಯಂತ್ರಗಳಲ್ಲಿ ಹಣವಿಲ್ಲ. ಇನ್ನು ಕೆಲ ಎಟಿಎಂಗಳು ಬಾಗಿಲು ಮುಚ್ಚಿದ್ರೆ, ಕೆಲವು ಎಟಿಎಂಗಳು ತಾಂತ್ರಿಕ ದೋಷದ ಕಾರಣ ರಿಪೇರಿಗೆ ಬಂದಿವೆ. ಹೀಗಾಗಿ ಸಾರ್ವಜನಿಕರು ಹಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದು ಕೇವಲ ಒಂದೇ ದಿನದ ಕತೆಯಲ್ಲ. ನಿತ್ಯ ಸಾರ್ವಜನಿಕರು ಮಹಿಳೆಯರು, ಮಕ್ಕಳು, ವೃದ್ಧರು, ವಿಶೇಷ ಚೇತನರು ಎಲ್ಲರದ್ದೂ ಇದೇ ಗೋಳು.

ಸುತ್ತ ಹಳ್ಳಿಗರು ಬ್ಯಾಂಕ್ ಒಳಗೆ ಸರದಿ ಸಾಲು ನಿಲ್ಲುವ ಬದಲಾಗಿ ಎಟಿಎಂಗಳಲ್ಲಿ ಹಣ ಪಡೆದರಾಯ್ತು ಎಂದು ಪಟ್ಟಣಕ್ಕೆ ಬಂದ್ರೆ ಎಟಿಎಂ ಸರಿಯಾಗಿರದ ಕಾರಣ ಸಾಲ ಪಡೆದು ಊರು ಸೇರುವ ಸ್ಥಿತಿ ಏರ್ಪಟ್ಟಿದೆ, ಇನ್ನು ಪರ ಸ್ಥಳಗಳಿಂದ ಆಗಮಿಸಿದ ಜನರಿಗೆ ದೇವರೆ ದಿಕ್ಕು ಎಂಬಂತಾಗಿದೆ

Edited By : Manjunath H D
Kshetra Samachara

Kshetra Samachara

13/01/2021 07:44 pm

Cinque Terre

35 K

Cinque Terre

0

ಸಂಬಂಧಿತ ಸುದ್ದಿ