ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸ್ ಠಾಣೆಯಲ್ಲಿ ಒಂದಾದ ಪ್ರೇಮಿಗಳು

ಧಾರವಾಡ: ತಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಇಲ್ಲ. ಹೇಗಾದರೂ ನಮ್ಮನ್ನು ಒಂದು ಮಾಡಿ ಎಂದು ಸಾಧನಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದ ಪ್ರೇಮಿಗಳಿಬ್ಬರನ್ನು ಅವರ ಮನೆಯವರ ಸಮ್ಮುಖದಲ್ಲಿ ಪೊಲೀಸ್ ಠಾಣೆಯಲ್ಲೇ ಒಂದು ಮಾಡಲಾಗಿದೆ.

ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಮಹೇಶ ತಳವಾರ (23) ಹಾಗೂ ಬೇಲೂರು ಗ್ರಾಮದ ದೀಪಾ ದೊಡಮನಿ (19) ಎಂಬವರು ಪರಸ್ಪರ ಪ್ರೀತಿಸಿದ್ದರು. ಇದಕ್ಕೆ ಮನೆಯವರ ಒಪ್ಪಿಗೆ ಇರಲಿಲ್ಲ. ನಮ್ಮನ್ನು ಒಂದು ಮಾಡಿ ಎಂದು ಈ ಇಬ್ಬರೂ ಪ್ರೇಮಿಗಳು ಸಾಧನಾ ಸಂಸ್ಥೆಯ ಮುಖ್ಯಸ್ಥೆ ಡಾ.ಇಸಾಬೆಲ್ಲಾ ಝೇವಿಯರ್ ಅವರ ಬಳಿ ಬಂದಿದ್ದರು. ಸೋಮವಾರ ರಾತ್ರಿ ಪ್ರೇಮಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡ ಇಸಾಬೆಲ್ಲಾ ಅವರು ಇಂದು ಮನೆಯವರನ್ನು ಗರಗ ಪೊಲೀಸ್ ಠಾಣೆಗೆ ಕರೆಯಿಸಿ ಅಲ್ಲೇ ತಿಳಿ ಹೇಳಿ ಇಬ್ಬರೂ ಪ್ರೇಮಿಗಳನ್ನು ಒಂದು ಮಾಡಿದ್ದಾರೆ.

Edited By : Vijay Kumar
Kshetra Samachara

Kshetra Samachara

12/01/2021 10:36 pm

Cinque Terre

67.77 K

Cinque Terre

20

ಸಂಬಂಧಿತ ಸುದ್ದಿ