ಹುಬ್ಬಳ್ಳಿ: ಇವರು ವೃತ್ತಿಯಿಂದ ವಾಣಿಜ್ಯೋದ್ಯಮಿ ಹಾಗೂ ನೈಋತ್ಯ ರೈಲ್ವೆ ವಲಯದ ಗುತ್ತಿಗೆದಾರರಾದರೂ ಪ್ರವೃತ್ತಿಯಿಂದ ಸಮಾಜ ಸೇವಕ. ಬದುಕಿಗೆ ವೃತ್ತಿಯಷ್ಟೇ ಸಮಾಜ ಸೇವೆಯೂ ಮುಖ್ಯ ಎಂದು ಹೇಳುವ ಇವರು, ತಾವು ಮಾಡುವ ಕೆಲಸ ದೇವರು ಮೆಚ್ಚಿದರೆ ಸಾಕು ಎಂಬುವಂತೆ ಸಾಮಾಜಿಕ ಕಳಕಳಿಯಲ್ಲಿಯೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಪ್ರಚಾರ ಬಯಸದ ವ್ಯಕ್ತಿ ಈಗ ತಮ್ಮ ಅಳಿಲು ಸೇವೆ ಎಂಬಂತೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಜೋಡಿಸಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಅವರು ಮಾಡುತ್ತಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಕೊಂಡು ಕೈಯಲ್ಲಿ ಶ್ರೀರಾಮನ ಚರಿತ್ರೆಯನ್ನು ಓದುತ್ತಿರುವವರು ಡಾ. ವಿ.ಎಸ್.ವಿ ಪ್ರಸಾದ. ಮೂಲತಃ ಆಂದ್ರಪ್ರದೇಶದ ವಿಜಯವಾಡದವರಾದ ವಿ.ಎಸ್.ವಿ ಪ್ರಸಾದ ಅವರು ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಸಾಕಷ್ಟು ಬಡತನ ಹಾಗೂ ಕಷ್ಟಗಳನ್ನು ಅನುಭವಿಸಿ, ಸತತ ಪರಿಶ್ರಮ ಹಾಗೂ ಸಾಮಾಜಿಕ ಸೇವೆಯನ್ನು ಮೂಲಕ ಈಗ ಪ್ರತಿಷ್ಠಿತ ಸ್ವರ್ಣಾ ಗ್ರೂಫ್ ಅಫ್ ಕಂಪನೀಸ್ ಸಂಸ್ಥಾಪಕರಾಗಿದ್ದಾರೆ.
ಪ್ರಸ್ತುತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾಗಿರುವ ವಿ.ಎಸ್.ವಿ ಪ್ರಸಾದ ಅವರು ಐತಿಹಾಸಿಕ ಹಾಗೂ ಭಾರತೀಯ ಪರಂಪರೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ತಮ್ಮ ಧಾರ್ಮಿಕತೆಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸುಮಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಆರಾಧನೆ ಮಾಡುತ್ತಿರುವ ವಿ.ಎಸ್.ವಿ ಪ್ರಸಾದ ಅವರು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಆಹಾರ ಹಾಗೂ ಅರ್ಥಿಕ ಸಹಾಯ ನೀಡಿದ್ದಾರೆ.ಇನ್ನೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುವಂತ ಸದುದ್ದೇಶದಿಂದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿರುವುದು ಅವರ ಸಾಮಾಜಿಕ ಬದ್ಧತೆ ಹಾಗೂ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ.
ಬಡತನ ಅನುಭವಿಸಿ ಬಂದಿರುವ ವಿ.ಎಸ್.ವಿ ಪ್ರಸಾದ ಅವರು ಬಡವರ ಮೇಲೆಯೇ ಹೆಚ್ಚಿನ ಪ್ರೀತಿ ಹೊಂದಿದ್ದು,ಕಳೆದ ವರ್ಷ ತಮ್ಮ ಹುಟ್ಟು ಹಬ್ಬವನ್ನು ಅನಾಥಾಶ್ರಮ ಹಾಗೂ ವೃದ್ಧಾಶ್ರಮದಲ್ಲಿ ಆಚರಿಸಿಕೊಳ್ಳುತ್ತಾರೆ.
ಸಾಕಷ್ಟು ಜನಪರ ಕಾರ್ಯವನ್ನು ಮಾಡಿರುವ ವಿ.ಎಸ್.ವಿ ಪ್ರಸಾದ ಅವರ ಸಾಧನೆ ಹೇಳುತ್ತಾ ಹೋದರೆ ಮುಗಿಯದ ಅಧ್ಯಾಯದಂತೆ ದಿನನಿತ್ಯದ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ಕೆ ಮೀಸಲಿಡುವ ಇವರಿಗೆ ಪುರಸ್ಕಾರಗಳ ಮಹಾಪೂರವೇ ಹರಿದು ಬಂದಿದೆ. ಏಷಿಯಾ ಗ್ರೇಟೆಸ್ಟ್ ಲೀಡರ್ 2019-20 ಅವಾರ್ಡ್ ಕೂಡ ಭಾಜನರಾಗಿದ್ದಾರೆ.
ದಾನ ಮಾಡಿದ್ದರು ಪರಸ್ಪರ ಕೈಗಳಿಗೂ ಗೊತ್ತಾಗಬಾರದು ಎಂಬುವಂತೆ, ಎಲೆ ಮರೆಯ ಕಾಯಿಯಂತೆ ಸಾಮಾಜ ಕಾರ್ಯವನ್ನು ಮಾಡುತ್ತಿರುವ ಡಾ.ಸಿ.ಎಚ್ ವಿ.ಎಸ್.ವಿ ಪ್ರಸಾದ ಅವರನ್ನು ಗುರುತಿಸಿ ಅವರ ಸಾಧನೆಯನ್ನು ಪರಿಚಯಿಸುವ ಪ್ರಯತ್ನ ನಮ್ಮದು.
Kshetra Samachara
04/01/2021 07:24 pm