ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶೈನಿಂಗ್ ಸ್ಟಾರ್ ಬಳಗದಿಂದ ಕಲ್ಲಂಗಡಿ ಹಣ್ಣು ವಿತರಣೆ

ನವಲಗುಂದ: ನಗರದ ಶ್ರೀ ರಾಮಲಿಂಗ ಕಾಮಣ್ಣನ ದರ್ಶನಕ್ಕೇ ಬಂದ ಭಕ್ತರಿಗೆ ಶೈನಿಂಗ್ ಸ್ಟಾರ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲಂಗಡಿ ಹಣ್ಣು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶೈನಿಂಗ್ ಸ್ಟಾರ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಬೈಲೂರು ಮಾತನಾಡಿ ಶ್ರೀ ರಾಮಲಿಂಗ ಕಾಮಣ್ಣನ ದರ್ಶನಕ್ಕೇ ಸಾವಿರಾರು ಭಕ್ತರು ಬರುತ್ತಾರೆ, ಅವರಿಗೆ ನಾವು ಕಲ್ಲಂಗಡಿ ಹಣ್ಣು ನೀಡುವುದರ ಮೂಲಕ ನಮ್ಮ ಅಲ್ಪ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ನಾವೆಲ್ಲಾ ಗೆಳೆಯರು ಕೂಡಿಕೊಂಡು ಕಾಮಣ್ಣನ ದರ್ಶನಕ್ಕೇ ಬಂದ ಭಕ್ತರಿಗೆ ಕಲ್ಲಂಗಡಿ ಹಣ್ಣು ನೀಡುತ್ತಿದ್ದೇವೆ ಎಂದು ರಾಮಕೃಷ್ಣ ಬಡಿಗೇರ್ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ರವಿ ಬ್ಯಾಹಟ್ಟಿ, ವಿಶ್ವನಾಥ ಶೆಲ್ಲೆನ್ನವರ, ರಾಜು ಗದಗಿನ, ರವಿ ಬ್ಯಾಹಟ್ಟಿ, ಮಾಬುಸಾಬ ಯರಗುಪ್ಪಿ, ಅಮೀತ ಕಲಾಲ್, ನಿಂಗಪ್ಪ ಕುಂಬಾರ, ಸತೀಶ್ ಹರಿವಾಳದ, ತಾನಾಜಿ ವಾಗಮೋಡೆ, ಶ್ರೀಕಾಂತ್ ಬರೋಜಿ, ಸೋಮಯ್ಯ ಪೂಜಾರ,ಶಂಭು ಹಿರೇಮಠ್, ಬಸು ಬೆಳವಟಗಿ, ಮಹೇಶ್ ಪೂಜಾರ, ಶರಣು ಕಲ್ಲೂರ್, ಸಂತೋಷ ಪವಾರ,ನಾಗರಾಜ್ ದಲಬಂಜನ್, ಪುಟ್ಟು ಹಿರಗಣ್ಣವರ, ರಾಘು ಮಲ್ಲಾಪುರ, ಆನಂದ ಜಕ್ಕನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/03/2022 08:24 pm

Cinque Terre

20.3 K

Cinque Terre

0

ಸಂಬಂಧಿತ ಸುದ್ದಿ